Dharwad

ಪ್ರತಿಭಟನೆಗೆ ಮುಂದಾಗಿದ್ದ 15 ಜನ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ: ಪೊಲೀಸ್ ಆಯುಕ್ತ ಎನ್ ಶಶಿಕುಮಾರ್.

Share

ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಸಂಬಂಧಿಸಿದಂತೆ ಪರವಾನಗಿ ನೀಡದೇ ಇದ್ದರೂ ಪ್ರತಿಭಟನೆಗೆ ಮುಂದಾಗಿದ್ದ ವಿವಿಧ ಸಂಘಟನೆಗಳ ಸುಮಾರು 15 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಹೋರಾಟಕ್ಕೆ ಅನುಮತಿ ನೀಡಬೇಕು ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಪರವಾನಗಿ ಕೇಳಿದ್ದರು. ಅವರಿಗೆ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದೇವು. ಆದರೆ, ಅವರು ಕೊಟ್ಟ ಮಾಹಿತಿ ಸಮರ್ಪಕವಾಗಿರಲಿಲ್ಲ. ಸೆಪ್ಟೆಂಬರ್ 8 ರಂದು ನಡೆದಿದ್ದ ಪ್ರತಿಭಟನೆ ಗಮನದಲ್ಲಿಟ್ಟುಕೊಂಡು, ಇಲ್ಲಿನ ಆಸ್ಪತ್ರೆ, ಶಾಲಾ, ಕಾಲೇಜುಗಳನ್ನೂ ಗಮನದಲ್ಲಿಟ್ಟುಕೊಂಡು ಅನುಮತಿ ನಿರಾಕರಿಸಲಾಗಿತ್ತು. ಧಾರವಾಡದ ಕೆಸಿಡಿಯಿಂದ ಮುಂದೆ ಶ್ರೀನಗರದವರೆಗೂ ಬ್ಯಾರಿಕೇಡ್ ಹಾಕಿ ಯಾರೂ ಪ್ರತಿಭಟನಾ ರ್ಯಾಲಿ ಹೋಗದಂತೆ ಕ್ರಮ ವಹಿಸಲಾಗಿತ್ತು. ಆದರೆ, ಈ ಬಾರಿ ರೋಗಿಗಳು, ಹೆಣ್ಣು ಮಕ್ಕಳು ಹಾಗೂ ಶಾಲಾ, ಕಾಲೇಜುಗಳಿಗೆ ಹೋಗುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಅಲ್ಲದೆ ಅನುಮತಿ ನಿರಾಕರಿಸಿದ ಮೇಲೂ ಕೆಲ ಮುಖಂಡರು ಪ್ರತಿಭಟನೆಗೆ ಸಜ್ಜಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸುಮಾರು 15 ಜನ ಮುಖಂಡರನ್ನು ವಶಕ್ಕೆ ಪಡೆದಿದ್ದೇವೆ. ಈ ಪ್ರತಿಭಟನೆಗೆ 26 ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದು ಮುಖಂಡರು ಹೇಳಿದ್ದರು. ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೂ ಅವರು ನೀಡಿರಲಿಲ್ಲ. ಹಾಗಾಗಿ ನಾವು ಕಾನೂನು ರೀತೊಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.

Tags:

error: Content is protected !!