Chikkodi

ನವದೆಹಲಿಯ ಬುದ್ಧಿಮಾಂಧ್ಯ ಮಕ್ಕಳ ಚಯನೀತ ತಂಡಕ್ಕೆ 14ನೇ ಪ್ರೇರಣಾ ಪುರಸ್ಕಾರ ಪ್ರದಾನ

Share

“ಭಾವನೆಗಳಿಂದ ಭಾರತವಾಗಿದೆ ಎಂಬುವುದಕ್ಕೆ ಜಗತ್ತಿನಲ್ಲಿ ಭಾರತೀಯರು ನೇತೃತ್ವ, ಕರ್ತೃತ್ವ ಹಾಗೂ ಮಾತೃತ್ವಕ್ಕೆ ಹೆಚ್ಚಿನ ಮಾನ್ಯತೆ ನೀಡಿರುವುದೇ ಇದಕ್ಕೆ ನಿದರ್ಶನವಾಗಿದೆ” ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ 14ನೇ ಪ್ರೇರಣಾ ಉತ್ಸವದಲ್ಲಿ ಭಾನುವಾರ ಭಾಗಿಯಾಗಿ 2025ನೇ ಸಾಲಿನ ಪ್ರೇರಣಾ ಪುರಸ್ಕಾರವನ್ನು ಸಾಧಕರಿಗೆ ಪ್ರದಾನ ಮಾಡಿ ಮಾತನಾಡುತ್ತಾ, “ನೊಂದವರಿಗೆ,ಬೆಂದವರಿಗೆ ಬಂಧುವಾಗಿ ನಿಲ್ಲುವಂತಹದು ಧರ್ಮವಾಗಿದೆ. ಹುಟ್ಟುಹಬ್ಬಗಳು ಉತ್ಸವಗಳಾಗಬೇಕು. ಎಲ್ಲರಿಗೂ ಪ್ರೇರಣೆಯಾಗಬೇಕು. ಅಂತಹ ಪ್ರೇರಣೆ ನೀಡುವ ಕಾರ್ಯವನ್ನು ಜೊಲ್ಲೆ ದಂಪತಿ ಮಾಡುತ್ತಾ ಬಂದಿರುವುದು ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯ ಪಟ್ಟರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ,”ಬುದ್ಧಿಮಾಂಧ್ಯ ಮಕ್ಕಳ ನೋವು ಅರ್ಥ ಮಾಡಿಕೊಳ್ಳುವ ಮಾತೃಹೃದಯಗಳು ಬೇಕಾಗಿವೆ. ತಾಯಂದಿರರು ತಮ್ಮ ಮಕ್ಕಳನ್ನು ಜೋಪಾನದಿಂದ ಸಾಕಬೇಕು. ಆಗಲೇ ಮಾತೃತ್ವಕ್ಕೆ ಹಿರಿಮೆ ಬರಲು ಸಾಧ್ಯವಿದೆ. ವಿಶೇಷ ಚೇತನ ಮಕ್ಕಳನ್ನು ಯಾರೂ ಅಲ್ಲಗಳೆಯಬಾರದು. ಅಂತಹ ಒಳ್ಳೆಯ ಗುಣ ಬೆಳೆಸಿಕೊಂಡಿದ್ದರಿಂದಲೇ ನಮ್ಮ ಬಾಳು ಬಂಗಾರವಾಗಿದೆ ಎಂದು ಹೆಮ್ಮೆಪಟ್ಟರು.

ಈ ಸಂದರ್ಭದಲ್ಲಿ ಆಶಾಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನಾಚರಣೆ ನಿಮಿತ್ಯವಾಗಿ ನೀಡುವ 2025ನೇ ಸಾಲಿನ ₹ 51 ಸಾವಿರ ಮೊತ್ತದ ಮುಖ್ಯ ಪ್ರೇರಣಾ ಪುರಸ್ಕಾರವನ್ನು ಬುದ್ಧಿಮಾಂಧ್ಯ ಮಕ್ಕಳನ್ನು ಒಳಗೊಂಡ ನವದೆಹಲಿಯ ಚಯನೀತ ಫೌಂಡೇಶನ್ ಬ್ಯಾಂಡ್ ತಂಡದ ಚಯನ ತನೀಜಾ, ಇಶಾನ ಪ್ರತಾಪಸಿಂಗ್, ಕೆವಿನ್ ಮಿಚೆಲ್, ಶ್ರೇಯಂ ಶ್ರೀವರ್ಧನ, ಶ್ರೇಯಂ ಚಕ್ರವರ್ತಿ, ಕೋಚ್ ಸಂದೀಪ ಪಾಲ್ ಅವರಿಗೆ ನೀಡಲಾಯಿತು.

ರಾಜೇಂದ್ರ ಪಾಟೀಲ-ಸಹಕಾರ ಕ್ಷೇತ್ರ, ಸುರೇಶ ಪಾಟೀಲ-ಕೃಷಿ ಕ್ಷೇತ್ರ, ಶ್ರೇಯಲ ಶಹಾ- ಸಾಂಸ್ಕೃತಿಕ ಕ್ಷೇತ್ರ, ಯುವರಾಜ ಪಾಟೀಲ-ಶಿಕ್ಷಣ ಕ್ಷೇತ್ರ, ನಿಜಪ್ಪ ಹಿರೇಮನಿ-ಸಮಾಜಸೇವೆ, ಶ್ರೀಧರ ಮಾಳಗಿ-ಯುವ ಸಾಧನೆ, ಗುರುದೇವಿ ಹುಲೆಪ್ಪನವರಮಠ-ಆಧ್ಯಾತ್ಮಿಕ ಕ್ಷೇತ್ರ, ಮಹೇಶ ಅಂಗಡಿ-ಕ್ರೀಡೆ, ಸುಭಾಷ ದಲಾಲ-ಮಾಧ್ಯಮ ಕ್ಷೇತ್ರದಲ್ಲಿ 2025ನೇ ಸಾಲಿನ ಪ್ರೇರಣಾ ಪುರಸ್ಕಾರ ಪ್ರಶಸ್ತಿಗೆ ಭಾಜನಾರಿಗಿದ್ದು, ಇವರಿಗೆ ತಲಾ ₹ 11 ಸಾವಿರ ನಗದು ಹಾಗೂ ಪ್ರಮಾಣ ಪತ್ರದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೊಲ್ಲೆ ಗ್ರುಪನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಿಸಿಸಿ ಬ್ಯಾಂಕ ಅಧ್ಯಕ್ಷ,ಜೊಲ್ಲೆ ಗ್ರುಪನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ,ನಿಪ್ಪಾಣಿಯ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಸಂಕೇಶ್ವರದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ, ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಅಶೋಕ ಸಾಧನಕರ, ರಾಜೇಂದ್ರ ಪಾಟೀಲ, ಸತ್ಯಕ್ಕ ಸಾಧನಕರ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಮುಂತಾದವರು ಇದ್ದರು.

Tags:

error: Content is protected !!