Ramdurg

ಮಾಲೆ ಹಾಕಲು ಒಪ್ಪದಿದ್ದಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ!

Share

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಪೋಷಕರು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದ 14 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗಡದ ಕೇರಿಯಲ್ಲಿ ನಡೆದಿದೆ.ಮೃತ ಧರಣೇಶ ತನಗೂ ಅಯ್ಯಪ್ಪ ಸ್ವಾಮಿ ದೀಕ್ಷೆ ಪಡೆಯಬೇಕು, ಮಾಲೆ ಧರಿಸಬೇಕು ಎಂಬ ಆಸೆಯನ್ನು ಮನೆಯವರ ಮುಂದೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಆದರೆ ವಯಸ್ಸು ಚಿಕ್ಕದಾಗಿರುವುದರಿಂದಲೋ ಅಥವಾ ಅನ್ಯ ಕಾರಣಗಳಿಂದಲೋ ಮನೆಯವರು ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಇದರಿಂದ ತೀವ್ರವಾಗಿ ಕುಪಿತಗೊಂಡ ಮತ್ತು ಮನನೊಂದ ಯುವಕ, ಯಾರು ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾನೆ.ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. “ಮಾಲೆ ಹಾಕಬೇಡ ಎಂದಿದ್ದಕ್ಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿರುವುದು ಮನ ಕಲಕುವಂತಿದೆ. ಇಡೀ ಗಡದ ಕೇರಿ ಯಲ್ಲಿ ಶೋಕದ ಛಾಯೆ ಆವರಿಸಿದೆಈ ಕುರಿತು ರಾಮದುರ್ಗ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸಣ್ಣ ಪುಟ್ಟ ಕಾರಣಗಳಿಗೆ ಇಂದಿನ ಯುವ ಪೀಳಿಗೆ ಇಂತಹ ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ..

Tags:

error: Content is protected !!