ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ಗಡಿಭಾಗದ ಬೆಳಗಾವಿ ಜಿಲ್ಲಾ ಶಿವಸೇನೆಯ ವತಿಯಿಂದ ಹಿಂದು ಹೃದಯ ಸಾಮ್ರಾಟ್ ದಿವಂಗತ ಮಾನ್ಯ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯತಿಥಿ ಕಾರ್ಯಕ್ರಮವು ವಡಗಾವ್‌ನ ಮಂಗಾಯಿ ನಗರದಲ್ಲಿರುವ ಸೋಮೇಶ್ವರ ಸಭಾಗೃಹದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಉಪ ಜಿಲ್ಲಾ ಪ್ರಮುಖರಾದ ಬಂಡು ಕೇರವಾಡಕರ ಮತ್ತು ಮಾಜಿ ನಗರಸೇವಕ ಮನೋಹರ ಹಲಗೇಕರ ಅವರು ಮಾತನಾಡಿದರು. ಇವರ ಹಸ್ತದಿಂದ ಹಿಂದು ಹೃದಯ ಸಾಮ್ರಾಟ್ ಮಾನ್ಯ ಬಾಳಾಸಾಹೇಬ್ ಠಾಕ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪ ನಗರ ಪ್ರಮುಖರಾದ ಪ್ರವೀಣ್ ತೇಜಂ, ವಿಠ್ಠಲ್ ಉಂದರೆ, ಅಮರ ಕಡಗಾವಕರ, ಸಂಜಯ್ ಚತೂರ್, ಮಂಗೇಶ್ ನಾಗೋಜೀಚೆ, ಶ್ರೀಧರ್ ಬಿರ್ಜೆ, ರಮೇಶ್ ಕಡುಲ್ಕರ, ಸಹದೇವ್ ರೇಮಾನಾಚೆ, ಮಂಗೇಶ್ ಪೋಟೆ, ಶುಭಂ ಪವಾರ್, ಜ್ಞಾನೇಶ್ವರ ಗೊಂದಳಿ, ಬಾಳು ಭೋಸಲೆ, ಫಕೀರಾ ಪಾಟೀಲ ಸೇರಿದಂತೆ ಹಿರಿಯರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
BELAGAVI
ಶಿವಸೇನೆಯಿಂದ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯತಿಥಿ ಕಾರ್ಯಕ್ರಮ

