Kagawad

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶಾಂತಿಸಾಗರ್ ಜೈನ್ ಆಶ್ರಮದಲ್ಲಿ ಸುಪಾರ್ಶ್ವಸೇನೆ ಮುನಿ ಮಹಾರಾಜರ ರವಿವಾರ ರಾತ್ರಿ ಸಮಾಧಿ ಮರಣ.

Share

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಆಚಾರ್ಯ ಶಾಂತಿಸಾಗರ್ ಜೈನ್ ಆಶ್ರಮದಲ್ಲಿ ಆಚಾರ್ಯ ಶ್ರಮಣರತ್ನ ಸುಭಲಸಾಗರ್ ಮುನಿ ಮಹಾರಾಜರ ಪರಮಶಿಷ್ಯ ಸುಪಾರ್ಶ್ವಸೇನ ಮುನಿ ಮಹಾರಾಜರು ಯಮಸಲ್ಲೇಖನ ವ್ರತ ಸ್ವೀಕರಿಸಿ ೧೦ ನೇ ದಿನದಂದು ರವಿವಾರ ರಾತ್ರಿ ೧೦.೫೩ ಗಂಟೆಗೆ ಸಮಾಧಿಮರಣ ಹೊಂದರು. ಅಂತಿಮ ವಿಧಿವತ ಸಂಸ್ಕಾರ ಸೋಮವಾರ ಬೆಳಿಗ್ಗೆ ನೆರವೇರಿತು.
ಸೋಮವಾರ ರಂದು ಆಚಾರ್ಯ ಶಾಂತಿಸಾಗರ್ ಜೈನ ಆಶ್ರಮದಲ್ಲಿ ಆಚಾರ್ಯಗಳಾದ ಧರ್ಮಸೇನ, ಜನಸೇನ್, ಶಾಂತಿಸೇನ್, ಮುನಿ ಮಹಾರಾಜರು ಹಾಗೂ ಮಾತಾಜಿಗಳ ಪಾವನ ಸಾನಿಧ್ಯದಲ್ಲಿ, ಜೈನ ಸಮಾಜದ ಕರ್ನಾಟಕ ಪುರೋಹಿತ ರತ್ನ ಆನಂದ್ ಉಪಾಧ್ಯ ಇವರು ಇನ್ನುಳಿದ ಪುರೋಹಿತರ ರೊಂದಿಗೆ ವಿಧಿ ವಿಧಾನ ಹಾಗೂ ಮಂತ್ರೋಪಚಾರಗಳಿAದ ಮರಣೋತ್ಸವ ಅಂತ್ಯವಿಧಿ ಸಂಸ್ಕಾರ ಕಾರ್ಯಕ್ರಮ ನೆರವೇರಿಸಿದರು.
ಸುಪಾರ್ಶ್ವಸೇನ ಮುನಿ ಮಹಾರಾಜರು ಸುಕ್ಷೇತ್ರ ಬಾಬಾನಗರ್‌ದಲ್ಲಿ ಶ್ರಮಣರತ್ನ ಸುಬಲಸಾಗರ್ ಮುನಿ ಮಹಾರಾಜರಿಂದ ೧೯೯೯ ರಲ್ಲಿ ಮುನಿ ದೀಕ್ಷೆ ಸ್ವೀಕರಿಸಿದ್ದರು. ಕಳೆದ ೨೬ ವರ್ಷಗಳಲ್ಲಿ ಧರ್ಮಸೇವೆ ಮಾಡಿದರು, ಮುನಿ ಮಹಾರಾಜರ ಪೂರ್ವಾಶ್ರಮದಲ್ಲಿ ಅವರು ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದ ರೈತಾಪಿ ಕುಟುಂಬದವರು. ತಂದೆ ನೇಮಿನಾಥ ರೆಗೌಡರ, ತಾಯಿ ಕೃಷ್ಣಾಬಾಯಿ ಇವರ ಪುತ್ರ ಶ್ರೀಪಾಲ ರೆಗೌಡರ ಇವರು ೨೬ ವರ್ಷ ಮುನಿಸೇವೆ, ಧರ್ಮದ ಸೇವೆ ಮಾಡಿ ಈಗ ಸಮಾಧಿಮರಣ ಹೊಂದರು.
ಬೆಳಿಗ್ಗೆ ಆಚಾರ್ಯ ಧರ್ಮಸೇನ ಮುನಿ ಮಹಾರಾಜರ ಸಾನಿಧ್ಯದಲ್ಲಿ ಮುನಿಸಂಘದ ವತಿಯಿಂದ ವಿನಯಅಂಜಲಿ ಅರ್ಪಿಸಲಾಯಿತು.
ಕರ್ನಾಟಕ ಪುರೋಹಿತ ರತ್ನ ಆನಂದ ಉಪಾಧೆ ಇವರು ಯಮ ಸಲ್ಲೇಖನ ವ್ರತ ಮತ್ತು ಸಮಾಧಿ ಮರಣದ ಬಗ್ಗೆ ಹೇಳುವಾಗ ಜೈನ ಮುನಿಗಳ ಸಮಾಧಿ ಮರಣವು ದೇಹದ ಅಂತ್ಯವಲ್ಲ—ಆತ್ಮದ ಮಹೋನ್ನತಿಯ ಆರಂಭ. ದೇಹದ ಬಂಧನಗಳನ್ನು ಒಂದೊAದಾಗಿ ಬಿಚ್ಚುತ್ತ, ಆಸೆ–ಆಕಾಂಕ್ಷೆಗಳ ಎಲ್ಲ ಗದರಿಕೆಗಳನ್ನು ಶಾಂತಿಯ ಮೌನದಲ್ಲಿ ಕರಗಿಸುತ್ತ, ಅವರು ಆಹಾರವನ್ನೂ ಮಾತನ್ನೂ ನಿಧಾನವಾಗಿ ತ್ಯಜಿಸುತ್ತಾರೆ. ಉಳಿಯುವುದು ಕೇವಲ ಪ್ರಾರ್ಥನೆಯ ಸ್ಪಂದನ, ಧ್ಯಾನದ ಶ್ವಾಸ, ಮತ್ತು ಜೀವಿತವನ್ನೇ ಕ್ಷಮೆಯಾಗಿ ಅರ್ಪಿಸುವ ಮಹಾ ವೈರಾಗ್ಯ. ಮರಣವನ್ನು ಹೆದರದೇ, ಅದನ್ನೇ ಸಮಾಧಿಯಂತೆ ಅಪ್ಪಿಕೊಳ್ಳುವ ಈ ಪವಿತ್ರ ಕ್ಷಣದಲ್ಲಿ, ಮನಸು ಬಿಡುತ್ತದೆ—ದೇಹವನ್ನು, ದುಃಖವನ್ನು, ಜನ್ಮಗಳನ್ನು. ಆತ್ಮ ಮಾತ್ರ ಹಗುರವಾಗಿ, ಬೆಳಕಿನತ್ತ ಏಳುತ್ತದೆ. ಎಂದು ಹೇಳುತ್ತಾ ಕಳೆದ ೧೦ ದಿನಗಳಿಂದ ವರ್ತ ಧರಿಸಿ ಸಮಾಧಿ ಮರಣ ಹೊಂದಿದ ಸುಪಾರ್ಶ್ವಸೇನ ಮುನಿ ಮಹಾರಾಜರ ಬಗ್ಗೆ ಹೇಳಿದರು.

ಸುಪಾರ್ಶ್ವಸೇನ ಮುನಿ ಮಹಾರಾಜರ ಗೃಹಸ್ಥಾಶ್ರಮದ ಸುಪುತ್ರ ನೇಮಿನಾಥ್ ಪಾರಿಸ್ ರೇಗೌಡರ ಮಾತನಾಡಿ, ೧೦೮ ಸುಪಾರ್ಶ್ವಸೆನ ಮುನಿ ಮಹಾರಾಜರು ಕಳೆದ ೧೦ ದನಿಗಳಿಂದ ಯಮಸಲ್ಲೇಖನ ವ್ರತ ಧರಿಸಿದರೂ ರವಿವಾರ ರಾತ್ರಿ ೧೦.೫೩ ರಾತ್ರಿ ಸಮಾಧಿ ಮರಣ ಸಿದ್ದಿಷಿ ಸ್ವರ್ಗಕ್ಕೆ ಹೋಗಿದ್ದಾರೆ. ರೇಗೌಡರ ಕುಟುಂಬ ವತಿಯಿಂದ ನಮಸ್ತೆ ಎಂದು ಹೇಳಿದರು.

ಅಂತ್ಯ ವಿಧಿ ಸಂಸ್ಕಾರ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ-ಶ್ರಾವಿಕೆಯರು ಪಾಲ್ಗೊಂಡು ತಮ್ಮ ಸೇವೆ ನೀಡಿ ಪುನೀತರಾದರು.
ಅಂತ್ಯವಿಧಿ ಕಾರ್ಯಕ್ರಮಕ್ಕೆ ಮುಂಬೈಯ ಉದ್ಯಮಿ ಪಂಕಜ್ ಕೋಟಾಡಿಯ, ಬಾಳಾಸಾಹೇಬ್ ಹರವಿ, ಬಾಬಾ ಅನಾಜೆ, ಸಚಿನ್ ರೆಗೌಡರ, ವಿಮಲ್ ಮಾತ್ರೆ, ಅಗ್ನಿ ಸ್ಪರ್ಶ ನೇಮಿನಾಥ್ ರೇಗೌಡರ್ ಇವರು ನೆರವೇರಿಸಿದರು, ಪುರೋಹಿತರಿಂದ ಪಂಚಾಮೃತ ಅಭಿಷೇಕ ನೆರವೇರಿಸಿದರು. ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ಕರ್ನಾಟಕ ಜೈನ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲ್ ಪಾಟೀಲ್, ನ್ಯಾಯವಾದಿ ಎಸ್.ಬಿ.ಮುನ್ನೋಳಿ, ಸುಭಾಷ್ ಉಪಾಧೆ, ಮಹೇಂದ್ರ ಉಪಾಧೆ, ಬಾಹುಬಲಿ ಉಪಾಧೆ, ಕುಮಾರ್ ಅಲಗೌಡರ, ಅರುಣ ಯಲಗುದ್ರಿ, ಕಿರಣ್ ಎಂದಗೌಡರ್, ರಾಜು ಜಕ್ಕನವರ್, ಭರತ್ ನಾಂದ್ರೆ, ಸತೀಶ್ ಹಜಾರೆ, ಭರತ ನರಸಗೌಡರ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶಾಂತಿಸಾಗರ ಆಶ್ರಮದ ಆನೆ ಪದ್ಮಾವತಿ ಸ್ವಾಮೀಜಿಗೆ ವಿನಯ ಅಂಜಲಿ ಸಲ್ಲಿಸಿತು.

Tags:

error: Content is protected !!