ಖಾನಾಪೂರ ಪಟ್ಟಣ ಪಂಚಾಯಿತಿ ಆವರಣ ಪಕ್ಕ ಹಳೆಯ ತುಕ್ಕು ಹಿಡಿದ ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಸಾಮಗ್ರಿ ಇದರ ಕಡೆಗೆ ನಿರ್ಲಕ್ಷ್ಯ ಧೋರಣೆ ಮಾಡಿದ ಮುಖ್ಯಾಧಿಕಾರಿ ಎಸ್.ಎಮ್.ಕರಬೇಟ್ಟ
ಆಂಕರ್ -ಖಾನಾಪೂರ ಪಟ್ಟಣ ಪಂಚಾಯಿತಿಯೂ ಖಾನಾಪೂರ ಪಟ್ಟಣಕ್ಕೆ ಒಂದು ಹೆಮ್ಮೆ ಅದರಲ್ಲೂ ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿ ಗೃಹದ ಪಕ್ಕದಲ್ಲಿ ಇದೆ ಈ ವಿಶ್ರಾಂತಿ ಗೃಹಕ್ಕೆ ವಿವಿಧ ಅಧಿಕಾರಿಗಳು, ಗಣ್ಯಮಾನ್ಯರು ಪ್ರತಿದಿನವೂ ಹೋಗಿ ಬರುತ್ತಿರುತ್ತಾರೆ ಆದರೆ ಪಟ್ಟಣ ಪಂಚಾಯಿತಿ ಮಾತ್ರ ತನ್ನ ಪಕ್ಕದ ಆವರಣದಲ್ಲಿ ಸುಮಾರು ವರ್ಷ ಹಳೆಯ ಟ್ರ್ಯಾಕ್ಟರ್ ತುಕ್ಕು ಹಿಡಿದ ಪರಿಸ್ಥಿತಿಯಲ್ಲಿ ಅಲ್ಲಿಯೇ ನಿಲುಗಡೆ ಮಾಡಿದೆ ಅದರ ಪಕ್ಕದಲ್ಲಿ ಒಂದು ಹಳೆಯ ಆಟೋ ಕೂಡಾ ನಿಲುಗಡೆ ಮಾಡಿದೆ ತುಕ್ಕು ಹಿಡಿದ ಈ ಎರಡು ವಾಹನಗಳ ಮೇಲೆ ಗಿಡಗಂಟಿಗಳು ಬೆಳೆದು ನಿಂತಿದೆ ಸಂಪೂರ್ಣ

ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುವ ಪಟ್ಟಣ ಪಂಚಾಯಿತಿ ತನ್ನ ಆವರಣದ ಪಕ್ಕದ ಪ್ರದೇಶದಲ್ಲಿ ಗಿಡಗಂಟೆಗಳನ್ನು ಸ್ವಚ್ಛ ಮಾಡಿ ಈ ಹಳೆಯ ತುಕ್ಕು ಹಿಡಿದ ಟ್ರ್ಯಾಕ್ಟರ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಮಿಲೇವಾರಿ ಮಾಡಲು ಮುಖ್ಯಾಧಿಕಾರಿ ಎಸ್.ಎಮ್.ಕುರಬೇಟ್ಟ ಅವರು ನಿರ್ಲಕ್ಷ್ಯ ಧೋರಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಇದರ ಬಗ್ಗೆ ಮೇಲಾಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಚರ್ಚೆ ಜರುಗುತ್ತಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

