


ಬೆಳಗಾವಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸುವರ್ಣ ಮಹೋತ್ಸವ
1975 ನೇ ಸಾಲಿನಲ್ಲಿ ನೇಮಕಾತಿಗೊಂಡ ಅಧಿಕಾರಿಗಳ ಸಮ್ಮಿಲನ
ಮಹತ್ವದ ಹುದ್ದೆಗಳು ಮತ್ತು ಸಾರ್ವಜನಿಕ ಸೇವೆಗಳ ಪರಿಚಯ ಬಿ ಜಿ ಪಾಟೀಲ
ಉನ್ನತ ಅಧಿಕಾರಿಗಳಿಗಿಂತ ಕೆಳ ಅಧಿಕಾರಿಗಳ ಕಾರ್ಯವೇ ಮುಖ್ಯ; ಎನ್.ಎಂ.ಹೋನ್ಯಾಳ
1975 ನೇ ಸಾಲಿನಲ್ಲಿ ನೇಮಕಾತಿಗೊಂಡ ಬೆಳಗಾವಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸುವರ್ಣ ಮಹೋತ್ಸವ ವಾರ್ಷಿಕೋತ್ಸವದ ಪುನರ್ಮಿಲನ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು.
ಇಂದು ಬೆಳಗಾವಿ ನಗರದ ಎಸ್. ಪಿ. ಕಛೇರಿಯಲ್ಲಿ 1975 ನೇ ಸಾಲಿನಲ್ಲಿ ನೇಮಕಾತಿಗೊಂಡ ಬೆಳಗಾವಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸುವರ್ಣ ಮಹೋತ್ಸವ ವಾರ್ಷಿಕೋತ್ಸವದ ಪುನರ್ಮಿಲನ ಸಮಾರಂಭ ನಡೆಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಎಸ್. ಎಸ್. ಪಾವಟೆ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಐಜಿಪಿ ಎಸ್.ಎಸ್. ಪಾವಟೆ 1998 ರಲ್ಲಿ ಸ್ಥಾಪನೆಗೊಂಡು ಸಂಘವು ನಡೆದುಕೊಂಡು ಬಂದ ದಾರಿಯನ್ನು ನೆನಪಿಸಿಕೊಂಡು, ಸಮವಸ್ತ್ರ ಧರಿಸಿ ಸಮಾಜ ಸೇವೆಯನ್ನು ಆರಕ್ಷಕರು ಮಾಡಿದ್ದಾರೆ. ಒಂದೆರೆಡು ಜನರ ತಪ್ಪುಗಳಿಂದ ಇಡೀ ಇಲಾಖೆಯನ್ನು ಗುರಿಯಾಗಿಸುವುದು ಸರಿಯಲ್ಲ. ಪೊಲೀಸರು ಸ್ವಾಭಿಮಾನದಿಂದ ಸೇವೆಯನ್ನು ಸಲ್ಲಿಸುತ್ತಾರೆ.
ಮುಖ್ಯ ಅತಿಥಿಗಳಾದ ಎನ್.ಎಂ.ಹೋನ್ಯಾಳ ಅವರು ಮಾತನಾಡಿ ಒಬ್ಬ ಪಿ.ಸಿ. ಹೆಡ್ ಕಾನ್ಸ್ಟೇಬಲ್ ಎ.ಎಸ್.ಐ ಮಾಡುವಂತಹ ಕೆಲಸಗಳನ್ನ ಯಾವ ಎಸ್ಐ ಡಿಜಿ, ಐಜಿ ಎಸ್ಪಿ.ಡಿಜಿಪಿ ಕೂಡ ಮಾಡುವುದಿಲ್ಲ ಎಂದು ಹೇಳಿದರು. ಪ್ರತಿಯೊಬ್ಬ ಉನ್ನತ ಅಧಿಕಾರಿಗಳು ತಮ್ಮ ಕೆಳಗಿನ ಅಧಿಕಾರಿಗಳಿಗೆ ಎಲ್ಲ ರೀತಿಯ ವಿಷಯಗಳನ್ನು ಪ್ರಸ್ತಾಪಿಸಬೇಕು ಹಾಗೂ ಯಾವುದೇ ಒಂದು ಇಲಾಖೆಗೆ ದೊಡ್ಡ ಹೆಸರನ್ನು ತಂದು ಕೊಡುವವರೆ ಈ ಕೆಳಮಟ್ಟದ ಹುದ್ದೆಯ ಅಧಿಕಾರಿಗಳು ಎಂದು ಹೇಳಿದರು.
ಈ ಕಾರ್ಯಕ್ರಮದ ಡಿ.ಎಂ. ಕಾಜಿ ಅವರು ಮಾತನಾಡಿ ಈ ಸುವರ್ಣ ಮಹೋತ್ಸವವು ನಮ್ಮ ಸೇವೆಯ ಒಂದು ಅಂತ್ಯವಲ್ಲ, ಬದಲಾಗಿ ನಮ್ಮ ಸ್ನೇಹ ಮತ್ತು ಬಾಂಧವ್ಯಕ್ಕೆ ಹೊಸ ಪ್ರಾರಂಭ. ಇಂದಿನ ಯುವ ಅಧಿಕಾರಿಗಳು ನಮ್ಮನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ನಿಮ್ಮ ಸೇವೆಯಲ್ಲಿ ಸದಾ ಮಾನವೀಯತೆ ಇರಲಿ, ಕಾನೂನಿನ ಕಟ್ಟುನಿಟ್ಟು ಇರಲಿ ಎಂದು ಹೇಳಿದರು. ಬರೋಬ್ಬರಿ 50 ವರ್ಷಗಳ ಹಿಂದೆ ಸೇವೆಗೆ ಸೇರಿ, ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಿವೃತ್ತ ಹಾಗೂ ಹಾಲಿ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಹು ವರ್ಷಗಳ ನಂತರ ಪರಸ್ಪರ ಭೇಟಿಯಾದ ಹಿರಿಯ ಅಧಿಕಾರಿಗಳು, ತಮ್ಮ ಮೊದಲ ನೇಮಕಾತಿಯ ದಿನಗಳನ್ನು, ಎಸ್.ಪಿ. ಕಛೇರಿಯಲ್ಲಿ ಕಳೆದ ದಿನಗಳನ್ನು ಮತ್ತು ತಾವು ಎದುರಿಸಿದ ಸವಾಲುಗಳನ್ನು ಸಂತೋಷದಿಂದ ಮೆಲುಕು ಹಾಕಿದರು.
ಡಿಸಿಪಿ ನಾರಾಯಣ್ ಬರಮನಿ ಅವರು, ನಿವೃತ್ತಯಾದ ಈ ಸಿಬ್ಬಂದಿಗಳು ಯಶಸ್ವಿ ಸೇವೆಯನ್ನು ಸಲ್ಲಿಸಿದ್ದಾರೆ. ಇದರಲ್ಲಿನ ಹಲವಾರು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ನಮಗೂ ಕೂಡ ದೊರೆತಿದೆ. ನಿವೃತ್ತ ಸಿಬ್ಬಂದಿಗಳು ತಮ್ಮ ಮಕ್ಕಳು ಮೊಮ್ಮಕಳಿಗೂ ಸಂಸ್ಕಾರಗಳನ್ನು ಕಲಿಸುವಂತಹ ಕೆಲಸವನ್ನು ಮಾಡಬೇಕು. ನಿವೃತ್ತರಾದರೂ ತಮ್ಮಲ್ಲಿರುವ ಕಾಣುತ್ತಿರುವ ಚೈತನ್ಯ ಹುಮ್ಮಸ್ಸು ಎಲ್ಲರಿಗೂ ಮಾದರಿ ಎಂದರು.
ಎಸ್. ಬಿ. ತೋರಗಲ್ , ಬಿ.ಜಿ.ಪಾಟೀಲ, ಎನ್. ಹೆಚ್. ಕಾಶಮ್ಮನವರ. ವಿ.ಜೆ. ಜೋಶಿ, ಎಸ್ ಎಸ್ ಪಾವಟೆ,ಎನ್ ಎಂ ಲಂಗೋಟಿ,ಎನ್ ವಿ ಬರಮನಿ, ಎ ಎಲ್ ಸದಲಗಿ, ಎ ಎಸ್ ಘೋರಿ, ಎಸ್ ಆರ್ ನಾಯ್ಡು, ಕೆ ಎಂ ಮಳಗಲಿ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

