ಚಿಕ್ಕೋಡಿ:ಚಿಕ್ಕೋಡಿ ಪಟ್ಟಣದಲ್ಲಿ ಹಾದಿಬಿದಿಯಲ್ಲಿ ಕಸ ಕಂಡರೆ ಮುಖ್ಯಾಧಿಕಾರಿ ಮನೆಯ ಮುಂದೆ ಹಾಕಿ ಎಂದು ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಮುಖ್ಯಾಧಿಕಾರಿ ಜಗದೀಶ್ ಈಟಿಯವರನ್ನು ತರಾಟೆಗೆ ತೆಗೆದುಕೊಂಡರು.
ಚಿಕ್ಕೋಡಿ ಪಟ್ಟಣದ ಮುಲ್ಲಾಪ್ಲಾಟನಲ್ಲಿ ಪ್ರಕಾಶ ಹುಕ್ಕೇರಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಕಸದ ಸಮಸ್ಯೆ ಎತ್ತಿದ್ದಾಗ ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ ಹುಕ್ಕೇರಿ ಈ ಬಗ್ಗೆ ಮುಖ್ಯಾಧಿಕಾರಿಗೆ ನಾನು ಸಾಕಷ್ಟು ಸಲ ಹೇಳಿದ್ದೇನೆ.ಆದ್ರೂ ಕೂಡಾ ಕೇಳುತ್ತಿಲ್ಲ.ಚಿಕ್ಕೋಡಿ ಪಟ್ಟಣದ ಎಲ್ಲ ಕಸವನ್ನು ಮುಖ್ಯಾಧಿಕಾರಿ ಮನೆ ಮುಂದೆ ಹಾಕಿ ಎಂದು ಜಗದೀಶ್ ಈಟಿಯವರನ್ನು ತರಾಟೆಗೆ ತೆಗೆದುಕೊಂಡರು.ನಾಳೆಯಿಂದ ಕಸದ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೆವೆ ಎಂದು ಜಗದೀಶ್ ಈಟಿ ಉತ್ತರಿಸಿದರು

