Chikkodi

ಇಂಗಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ‌ ಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ ಎಂ.ಎಲ್.ಸಿ ಪ್ರಕಾಶ ಹುಕ್ಕೇರಿ

Share

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಅನ್ನಪೂರ್ಣೇಶ್ವರಿ ಫೌಂಡೇಶನ್ ನಿಂದ ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇಂಗಳಿ ಗ್ರಾಮದ ಮರಾಠಾ ಸಮುದಾಯ ಬಾಂಧವರಿಗೆ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿ ಪ್ರಕಾಶ ಹುಕ್ಕೇರಿ ಇಂಗಳಿ ಗ್ರಾಮದ ಮರಾಠಾ ಸಮುದಾಯ ಬಾಂಧವರು ಶಿವಾಜಿ ಮಹಾರಾಜರ ಪುತ್ಥಳಿಗೆ ದೇಣಿಗೆಯನ್ನು ನೀಡುವಂತೆ ಮನವಿಯನ್ನು ಮಾಡಿಕೊಂಡಿದರು.ಅದರಂತೆ ಇವತ್ತು ಅನ್ನಪೂರ್ಣೇಶ್ವರಿ ಫೌಂಡೇಶನ್ ನಿಂದ 5 ಪಕ್ಷ ರೂಪಾಯಿ ನೀಡಿದೇವೆ ಎಂದರು.

ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ ಹಾಗೂ ಇಂಗಳಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ರಾಜು ಮಾನೆ ಮಾತನಾಡಿ ಇಂಗಳಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ನಿರ್ಮಾಣಕ್ಕೆ ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ತಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ಮೂಲಕ ಮೊದಲನೇ ಕಂತಾಗಿ 5 ಲಕ್ಷ ರೂಪಾಯಿ ನೀಡಿದ್ದಾರೆ.ಇನ್ನೂ ಹೆಚ್ಚಿನ ದೇಣಿಗೆಯನ್ನು ನೀಡುತ್ತೆವೆ ಎಂದಿದ್ದಾರೆ. ಅವರಿಗೆ ಇಂಗಳಿ ಗ್ರಾಮಸ್ಥರು ಹಾಗೂ ಮರಾಠಾ ಸಮುದಾಯದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ರಾಮಾ ಮಾನೆ,ಅನೀಲ ಮಾನೆ,ರಣಜೀತ ಶಿರಶೇಟ,ಗಣಪಾ ಧನವಡೆ,ಪಾಂಡುರಂಗ ಮಾನೆ,ಬಾಳಾಸಾಹೇಬ ಪಾಟೀಲ,ಸುರೇಶ ಕಾಗವಾಡೆ,ರಮೇಶ ಮುರಚಟೆ,ಸುಭಾಷ ಉನ್ನಾಳೆ ,ಅಪ್ಪಾಸಾಬ ಜತ್ರಾಟೆ,ಶಿವಾಜಿ ಪವಾರ,ಸಿದ್ದರಾಮ ಅಪರಾಜ,ಅರುಣ ಪಾಟೋಳೆ,ಮೋಹನ ಪಾಟೋಳೆ,ವಸಂತ ಮಾನೆ,ಸಂಜು ಮಾನೆ,ಸಂಜು ಬಾಳೇಶ ಮಾನೆ,ಸಂಜು ವಿಠೋಬಾ ಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!