

ನಾನು ಶಾಸಕ ಹಾಗೂ ಅನೇಕ ಹುದ್ದೆಗಳಲ್ಲಿ ಆಯ್ಕೆಯಾದ ಬಳಿಕ ಪ್ರತಿಯೊಬ್ಬ ಕಾರ್ಯಕರ್ತನಿಗೆ ನನ್ನನ್ನು ಸನ್ಮಾನಿಸಬೇಕಾದರೆ ಶಾಲ, ಹುಮಾಲೆ ತರಬೇಡಿ, ಅವುಗಳು ಅನಾವಶ್ಯಕ ವೆಚ್ಚ, ಅದರ ಬದಲಾಗಿ ವಿದ್ಯಾರ್ಥಿಗಳೇ ಶಿಕ್ಷಣಕ್ಕಾಗಿ ನೋಟ್ ಬುಕ, ಶೈಕ್ಷಣಿಕ ಸಾಹಿತ್ಯ ನೀಡಿರಿ ಅಂದರೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅವುಗಳನ್ನು ಹಂಚಿದರೆ ಒಳ್ಳೆದಾಗುತ್ತಿದೆ, ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.
ಶನಿವಾರ ಸಂಜೆ ಶೇಡಬಾಳ-ಕಲ್ಲಾಳ ಮಾರ್ಗದ ಶ್ರೀ ಸೀಮಿ ಲಕ್ಷ್ಮಿ ಗುಡಿಯ ಶತಮಾನೋತ್ಸವ ಕಾರ್ಯಕ್ರಮ ನಿಮಿತ್ಯ ಶಾಸಕ ರಾಜು ಕಾಗೆ ಆಗಮಿಸಿದರು, ಅವರನ್ನು ಕಾರ್ಯಕರ್ತರು, ಹೂಮಾಲೆ ಶಾಲು ನೀಡಿ ಸನ್ಮಾನಿಸಿದ ಬಳಿಕ ಅವರು ಪ್ರತಿಕರಿಸಿದರು.
ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದವಳಿಕ ಸಾವಿರಾರು ಕಾರ್ಯಕರ್ತರು ಇದೇ ರೀತಿ ಕೂಮಾಲೇ ಶಾಲು ನೀಡಿ ಸನ್ಮಾನಿಸಿದ್ದಾರೆ, ನಾನು ಎಷ್ಟೋ ವಿನಂತಿ ಮಾಡಿದರು ಕಾರ್ಯಕರ್ತರು ನನ್ನ ವಿಚಾರ ತಿಳಿದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಸಿಮೀ ಲಕ್ಷ್ಮಿ ಗುಡಿ ನಿರ್ಮಿಸಿ ನೂರು ವರ್ಷ ಗತಿಸಿವೆ ಎಲ್ಲರೂ ಭಕ್ತಿಯಿಂದ ಶ್ರದ್ಧೆಯಿಂದ ದೇವರ ದರ್ಶನ ಪಡೆದು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳುತ್ತೇವೆ. ಅದರಲ್ಲಿ ತಪ್ಪೇನಿಲ್ಲ ಇಲ್ಲಿಗೆ ಬರುವ ಮಹಿಳಾ ಭಕ್ತರು ನಿಮ್ಮ ಮನೆಯಲ್ಲಿ ಇರುವ ಸೊಸೆ ನಿಮ್ಮ ಮಗಳಂತೆ ತಿಳಿದು ಅವರೊಂದಿಗೆ ಮಗಳಿನ ತರಹ ನೋಡಿರಿ ಅದೇ ರೀತಿ ಸೊಸೆಯಿಂದರು ತಮ್ಮ ಅತ್ತೆಯರಿಗೆ ತಾಯಿ ಸ್ಥಾನದಲ್ಲಿ ನೋಡಿಕೊಂಡರೆ ನಿಮ್ಮ ಮನೆ ಸ್ವರ್ಗದಂತೆ ಇರುತ್ತದೆ. ಎಂದು ಅನೇಕ ಅನುಭವದ ಮಾತುಗಳನ್ನು ಹೇಳಿ ಕಾರ್ಯಕ್ರಮದಲ್ಲಿ ವಿಶೇಷವಾದ ಪ್ರಭಾವ ನೀಡಿದರು.
ಕವಲಗುಡ್ಡದ ಅಮರೇಶ್ವರ ಮಹಾರಾಜರು ಪ್ರವಚನ ನೀಡುವಾಗ ಪ್ರತಿಯೊಬ್ಬರು ದೇವರ ಮೇಲೆ ನಂಬಿಕೆ ಇಟ್ಟು ಭಯಯುಕ್ತ ಆದರದಿಂದ ದರ್ಶನ ಪಡೆದು ತಮ್ಮ ಜೀವನ ಸಾಗಿಸುತ್ತೀರಿ ಆದರೆ ನಿಮ್ಮಲ್ಲಿಯ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಶಿಕ್ಷಣ ನೀಡುವಾಗ ಕಷ್ಟಾಪಟ್ಟು ನೀವು ಅನೇಕ ಸಮಸ್ಯೆಗಳನ್ನು ಎದುರಿಸಿ ಶಿಕ್ಷಣ ನೀಡುತ್ತಿರಿ ನಿಮ್ಮ ಮಕ್ಕಳು ಏನು ಮಾಡುತ್ತಾರೆ ಗಮನ ಹರಿಸಿರಿ. ಅನೇಕ ಯುವತಿಯರು ಏನೇನು ಮಾಡುತ್ತಿದ್ದಾರೆ ಮೊಬೈಲದಲ್ಲಿ ಮೊಬೈಲ್ಗಳಲ್ಲಿ ಚಾಟಿಂಗ್ ಮಾಡುತ್ತಾ ಏನು ಮಾಡುತ್ತಿದ್ದಾರೆ,ಅವರ ಮೇಲೆ ಒಳ್ಳೆ ಸಂಸ್ಕಾರ ಮಾಡಿರಿ, ನಿಮ್ಮ ಪ್ರಪಂಚ ಒಳ್ಳೆ ರೀತಿಯಲ್ಲಿ ರೂಪಿಸಿಕೊಳ್ಳಲು ತಂದೆ ತಾಯಿ ಗಳಿಗೆ ಯಾವ ರೀತಿ ನೀವು ಶ್ರದ್ಧೆಯಿಂದ ಕಾಣುತ್ತೀರಿ ಅದೇ ರೀತಿ ಅತ್ತೆ ಮಾವ ಇವರನ್ನು ನೋಡಿಕೊಳ್ಳಿರಿ,
ಮೊದಲು ನಿಮ್ಮ ಮನೆ ಮಂದಿರಾಗಿ ಮಾಡಿಕೊಳ್ಳಿ ಅಂದರೆ ಮಾತ್ರ ದೇವರ ಮೇಲೆ ಭಕ್ತಿ ಶ್ರದ್ಧೆ ಇಟ್ಟಂತಾಗುತ್ತದೆ ಇಂತಹ ಮಾರ್ಮಿಕ ಮಾತುಗಳಿಂದ ಪ್ರವಚನ ನೀಡಿದರು.
ಸಮಾರಂಭದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ್ ವಾಗಮೊಡೆ, ಹಿರಿಯರಾದ
ಜೋತಗೌಡ ಪಾಟೀಲ, ಮಹದೇವ ಕಟಗೇರಿ, ದೇವಸ್ಥಾನ ಸಮಿತಿಯ ಎಲ್ಲ ಹಿರಿಯ ಸದಸ್ಯರು, ಮಹಿಳಾ ಭಕ್ತರು ಪಾಲ್ಗೊಂಡಿದ್ದರು, ಸಲ್ಮತಿ ಮಹಾವಿದ್ಯಾಲಯದ ಪ್ರಾಚಾರ್ಯ ಬಾಹುಬಲಿ ಬನಿಜವಾಡ ನಿರೂಪಿಸಿ ಹೊಂದಿಸಿದರು.

