ಸೀಮೆ ಲಗ್ಮವ್ವಾಚಾಂಗ್ ಬಲೋ ಎಂಬ ಘೋಷಣೆ ಕೂಗುತ್ತಾ ಶ್ರೀ ಸೀಮಿ ಲಕ್ಷ್ಮಿ ದೇವಿಯ ಆರಾಧನೆ ಮಾಡುತ್ತ ಅನೇಕ ಭಕ್ತರು ಒಂದುಗೂಡಿ ಶತಮಾನೋತ್ಸವದ ದಿವ್ಯ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಶ್ರೀ ಪರಮ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು ಜ್ಞಾನ ಯೋಗಾಶ್ರಮ ವಿಜಯಪುರ ಮತ್ತು ಶ್ರೀ ಬಸವೇಶ್ವರ ಮಹಾಸ್ವಾಮೀಜಿಗಳು ಗುರುದೇವ ಆಶ್ರಮ ಉಗಾರ್ ಖುರ್ದ್ ಇವರ ದಿವ್ಯ ಸಾನಿಧ್ಯದಲ್ಲಿ ಗುರುವಾರ ರಂದು 101 ಸುಮಂಗಲೆಯರ ಉಪಸ್ಥಿತಿಯಲ್ಲಿ ಮಹಾ ಕುಂಭಮೇಳ ಹಮ್ಮಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂದಿರ ನಿರ್ಮಿಸಿ 101 ವರ್ಷಗತಿಸಿದರಿಂದ ಇಲ್ಲಿಯ ಮಂದಿರದ ಕಮಿಟಿ ಸದಸ್ಯರು ಒಂದುಗೂಡಿ 101 ಸಸಿಗಳನ್ನು ನೆಟ್ಟು ಕಾಡು ಬೆಳೆಸಿ ನಾಡು ಉಳಿಸಿ ಉದ್ದೇಶವನ್ನು ಸಾರ್ಥಕ ಗೊಳಿಸಿದ್ದಾರೆ.
ಶುಕ್ರವಾರ ರಂದು ಪರಮಪೂಜ್ಯ ಚಿದ್ಗಣಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಜೋಡು ಕುರುಳಿ ಇವರಿಂದ ಪ್ರವಚನ ಕಾರ್ಯಕ್ರಮ ಹಾಗೂ ಹಿರಿಯರಿಗೆ ಸನ್ಮಾನ ಮಾಡಲಾಯಿತು.

ಶನಿವಾರ ರಂದು ಪರಮಪೂಜ್ಯ ಸಿದ್ದಯೋಗಿ ಅಮರೇಶ್ವರ ಮಹಾರಾಜರ ಸಾನಿಧ್ಯದಲ್ಲಿ ಪ್ರವಚನ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ನಾಳೆ ರವಿವಾರರಂದು ಪರಮಪೂಜ್ಯ ಬಸವಲಿಂಗ ಮಹಾಸ್ವಾಮಿಜಿಗಳ ಇವರಿಂದ ಪ್ರವಚನ ಮತ್ತು 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ.
ಸೋಮವಾರ ರಂದು ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ಪರಮಪೂಜ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿ ಕನ್ನೆರಿ ಮಠ ಕೊಲ್ಲಾಪುರ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರಗಿಲಿದೆ. ಸದ್ಭಕ್ತರು ಇದರ ಲಾಭ ತೆಗೆದು ಕೊಳ್ಳಬೇಕೆಂದು ಮಂದಿರದ ಸಮಿತಿ ವತಿಯಿಂದ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ತಿಳಿಸಿದರು.
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

