ಬೆಳಗಾವಿ: ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಸುತ್ತಮುತ್ತಲಿನ ಮಹಿಳೆಯರು ಆಕರ್ಷಕ ರಂಗೋಲಿಯನ್ನು ಬಿಡಿಸಿ, ಸಾವಿರಾರು ದೀಪಗಳನ್ನು ಹಚ್ಚಿ ಕಾರ್ತಿಕೋತ್ಸವಕ್ಕೆ ಸಾಕ್ಷಿಯಾದರು.ದೀಪೋತ್ಸವದ ಹಿನ್ನೆಲೆ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. (ಫ್ಲೋ)
ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತೀಕ ಮಾಸದ ಕೊನೆಯ ಶುಕ್ರವಾರ ದೀಪೋತ್ಸವವನ್ನು ಆಚರಿಸಲಾಗುತ್ತಿದೆ. ಮಹಾಲಕ್ಷ್ಮೀ ಮಹಿಳಾ ಮಂಡಳದ ವತಿಯಿಂದ ಭಕ್ತಿಗೀತೆಗಳ ಪ್ರಸ್ತುತಿ ನಡೆಯಿತು. ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜನರು ಕಾರ್ತಿಕೋತ್ಸವದಲ್ಲಿ ಭಾಗಿಯಾಗಿದ್ದಾರೆ. ಕತ್ತಲಿನಿಂದ ಬೆಳಕಿನೆಡೆ ಒಯ್ಯುವುದೇ ದೀಪಾವಳಿಯ ಹಬ್ಬ. ಬೆಳಗಾವಿ ಮಹಾನಗರವನ್ನು ತಾಯಿ ಮಹಾಲಕ್ಷ್ಮೀಯೂ ಬೆಳಕಿನೆಡೆ ಕರೆದೊಯ್ಯಲಿ. ಉತ್ತೋರೊತ್ತರ ಅಭಿವೃದ್ಧಿಯಾಗಲಿ ಎಂದು ದೇವಸ್ಥಾನ ಮಂಡಳಿಯ ಸತೀಶ್ ಮಾಳವದೆ ಹಾರೈಸಿದರು. ಬೈಟ್
ಈ ಕಾರ್ತಿಕೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

