Chikkodi

ನಾಗರಮುನ್ನೋಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಕನಕದಾಸರ ಜಯಂತಿ

Share

ಪ್ರಾರಂಭದಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆಯ ನಾಗರಮುನ್ನೋಳಿ ಗ್ರಾಮಾದಾದ್ಯಂದತ ಚೆಂಡೆ ವಾದ್ಯದೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.ಬಳಿಕ ಕನಕದಾಸ ಭವನದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಪೂಜಾರಿಯವರು ಭಕ್ತ ಕನಕದಾಸರ ಜೀವನ ಚರಿತ್ರೆ ಕುರಿತು ವಿಸ್ತೃತ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆಯವರು ಮಾತನಾಡಿ ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ. ದಾಸಶ್ರೇಷ್ಠರೆಂದೇ ಕರೆಯಲಾಗುವ ಕನಕದಾಸರು ಓರ್ವ ಮಹಾನ್‌ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಅವರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕನಕದಾಸರ ಕೀರ್ತನೆಗಳು ಎಂದು ಕರೆಯಲ್ಪಡುವ ಅವರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ ಎಂದರು‌.

ಅಧ್ಯಕ್ಷತೆ ವಹಿಸಿದ್ದ ಹಾಲುಮತ ಸಮಾಜದ ಹಿರಿಯ ಮುಖಂಡ ಸಿದ್ದಪ್ಪ ಮಯ್ರಾಯಿ ಮಾತನಾಡಿ ಕನಕದಾಸರು ಸಮಾಜದಲ್ಲಿ ಸಾಮಾಜಿಕ,ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಂದೇಶ ನೀಡಿದ ಮಹಾನ ಸಂತರು. ನಾಗರಮುನ್ನೋಳಿ ಗ್ರಾಮದಲ್ಲಿ ಇವತ್ತು ಕನಕದಾಸರ ಜಯಂತಿ ಅದ್ದೂರಿಯಾಗಿ ಜರುಗಿದೆ.ಮುಂದಿನ ವರ್ಷ ಕೂಡಾ ಇದಕ್ಕಿಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ರಾಜಮಾ ಮುಲ್ತಾನಿ,ಉಪಾಧ್ಯಕ್ಷ ಶಾಂತಾ ಬಾನೆ,ಶಂಕರ ಹೆಗಡೆ,ಶಿವು ಮಯ್ರಾಯಿ,ಅರುಣ ಮಯ್ರಾಯಿ,ರಾಜು ಕುಂಬಾರ,ಜ್ಯೋತೆಪ್ಪ ಖಗನ್ನವರ,ಅನೀಲ ಈಟಿ,ಕುಮಾರ. ಈಟಿ,ಲಗಮಣ್ಣ ಬಂಬಲವಾಡೆ,ಎಂ.ಕೆ.ಪೂಜಾರಿ,ಮಾರುತಿ ಮರ್ಯಾಯಿ,ಬಾಳಪ್ಪ ಬಾನೆ,ಶ್ರೀಶೈಲ್ ನಾಗರಾಳೆ,ಸುರೇಶ ಕೋಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!