Uncategorized

ಸಾಲು ಮರದ ತಿಮ್ಮಕ್ಕನ ಕೊನೆ ಆಸೆ ಈಡೇರಿಸುತ್ತೇನೆ; ಸಿಎಂ ಸಿದ್ಧರಾಮಯ್ಯ

Share

ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃಕ್ಷಮಾತೆ, ಇಂದು ಮಧ್ಯಾಹ್ನ 12ಗಂಟೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನು ನೆನಪು ಮಾತ್ರ. ಮಕ್ಕಳಿಲ್ಲ ಎಂದು ಕೊರಗದೇ, ತಮ್ಮ ಪತಿಯ ಬೆಂಬಲ ಪಡೆದು ಸಹಸ್ರಾರು ಮರಗಳನ್ನು ನೆಟ್ಟು, ಪೋಷಿಸಿದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ. ತಿಮ್ಮಕ್ಕ ಅವರು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಇನ್ನು ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಸಾಲುಮರದ ತಿಮ್ಮಕ್ಕನ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಅವರೊಬ್ಬ ಪರಿಸರವಾದಿಯಾಗಿದ್ದರು. ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ನಡೆಯುತ್ತೆ. ಇನ್ನು ತಿಮ್ಮಕ್ಕ ಅವರು ತಮ್ಮ ಕೊನೆ ಆಸೆಯನ್ನು ಪತ್ರದ ಮೂಲಕ ತಿಳಿಸಿದ್ದು, ಅದನ್ನು ಪರಿಶೀಲಿಸಿ ಅವರ ಆಸೆ ಈಡೇರಿಸುತ್ತೇವೆ. ಬೆಂಗಳೂರಿನಲ್ಲೊಂದು ತಿಮ್ಮಕ್ಕ ವಸ್ತು ಸಂಗ್ರಾಲಯ ಮಾಡಬೇಕೆಂದು ಅವರ ಕೊನೆ ಆಸೆಯ ಪತ್ರದಲ್ಲಿ ಎಂದು ಬಹಿರಂಗಪಡಿಸಿದರು.

Tags:

error: Content is protected !!