ಉತ್ತಮ ಶಿಕ್ಷಕರಿಗೆ ಜನ ಬೆಂಬಲ ಲಭಿಸುವದಕ್ಕೆ ಇಂದಿನ ಕಾರ್ಯಕ್ರಮವೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೋರಟ್ಟಿ ಹೇಳಿದರು.

ಹುಕ್ಕೇರಿ ನಗರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸದಾಶಿವ ಸಂಬಾಳ ರವರ 75 ನೇ ಜನ್ಮ ದಿನದ ಅಂಗವಾಗಿ ಗುರು ಬಸವ ಚೇತನ ಗ್ರಂಥ ಬಿಡುಗಡೆ ಸಮಾರಂಭ ವನ್ನು ವಿರಕ್ತಮಠದ ಶಿವ ಬಸವ ಮಹಾಸ್ವಾಮಿಗಳು ಮತ್ತು ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಹಾಗೂ ಶಿವಾನಂದ ದೇವರ,ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿಡಸೋಸಿ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ವೇದಿಕೆ ಮೇಲೆ ವಿಶ್ರಾಂತ ಕುಲಪತಿ ಕೆ ಬಿ ಗುಡಸಿ, ಮಾಜಿ ಸಚಿವರಾದ ಎ ಬಿ ಪಾಟೀಲ, ಶಶಿಕಾಂತ ನಾಯಿಕ, ಉದ್ಯಮಿ ಪೃಥ್ವಿ ಕತ್ತಿ, ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ,ರೇವತಿ ಮಠದ, ಉಪಸ್ಥಿತರಿದ್ದರು.
ನಂತರ ಗುರು ಬಸವ ಚೇತನ ಗ್ರಂಥ ಬಿಡುಗಡೆ ಗೋಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೋರಟ್ಟಿ ನಿವೃತ್ತ ಶಿಕ್ಷಕರಾದ ಸದಾಸಶಿವ ಸಂಬಾಳ ಮತ್ತು ಶ್ರೀಶೈಲಯ್ಯಾ ಹಿರೇಮಠ ರವರ ನಿಸ್ವಾರ್ಥ ಸೇವೆ ಇಂದಿನ ಕಾರ್ಯಕ್ರಮದ ಜನಸ್ಥೋಮ ನೋಡಿದರೆ ಗೋತ್ತಾಗುತ್ತದೆ,ಸಂಬಾಳ ಕುಟುಂಬ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮಾದರಿಯಾಗಿದೆ ಎಂದರು.

ಸಂಭಾಳ ಬಂಧುಗಳಿಂದ ಸಭಾಪತಿ ಬಸವರಾಜ ಹೋರಟ್ಟಿ ಮತ್ತು ಮಹಾವೀರ ನಿಲಜಗಿ ಯವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ಚಂದ್ರಶೇಖರ ಶ್ರೀಗಳು ಮಾತನಾಡಿ ಅಸೂಯೆ ಮತ್ತು ದ್ವೇಷ ಇಲ್ಲದೆ ಸಮಾಜದಲ್ಲಿ ಸದಾ ಕ್ರೀಯಾಶೀಲತೆ ಯಿಂದ ಬದುಕು ಸಾಗಿಸುತ್ತಿರುವ ಸಂಭಾಳ ಸಹೋದರರು ಶತಾಯುಸಿಗಳಾಗಲಿ ಎಂದು ಹಾರಿಸಿದರು.
ನಂತರ ಸದಾಶಿವ ಸಂಬಾಳ ಮತ್ತು ಶ್ರೀಶೈಲಯ್ಯಾ ಸಂಬಾಳ ದಂಪತಿಗಳಿಗೆ ಗಣ್ಯರು ಸತ್ಕರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಡಾ, ಸಿದ್ದಾರ್ಥ ಪೂಜಾರ, ಕುನಾಲ ಪಾಟೀಲ, ಜಿ ಆರ್ ಭಟ್ಟ, ಡಾ, ಜಿ ಕೆ ಹಿರೇಮಠ, ಸುರೇಶ ಜಿನರಾಳಿ, ಡಿ ಎಸ್ ನಾಯಿಕ ಮೊದಲಾದವರು ಉಪಸ್ಥಿತರಿದ್ದರು.


