ರಾಯಬಾಗ: ತಾಲೂಕಿನ ಭಿರಡಿ ಗ್ರಾಮದಲ್ಲಿ ಶಾರ್ಟಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸುಮಾರು 50 ಏಕರೆಗಿಂತ ಹೆಚ್ಚು ಕಬ್ಬಿನ ಬೆಳೆ ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ.

ಭಿರಡಿ ಗ್ರಾಮದ ವಿಠ್ಠಲರಾಯ ದೇವಸ್ಥಾನದ ಬಳಿ ಈ ದುರ್ಘಟನೆ ಸಂಭವಿಸಿದ್ದು, ನಿಂಗಪ್ಪ ಮಿರ್ಜೆ, ರಾಜು ಲಂಗೋಟೆ, ನಾಗಪ್ಪ ತೇಲಿ, ಗಂಗಪ್ಪ ತೇಲಿ, ಚಿದಾನಂದ ತೇಲಿ, ರಾಮು ಲಂಗೋಟೆ, ವಿಠ್ಠಲ ಲಂಗೋಟೆ, ಅಮರ್ ಕೆಸ್ತಿಕರ್, ಸಂತೋಷ್ ಕೇಸ್ತಿಕರ, ಕೃಷ್ಣಬಾಯಿ ಲಂಗೋಟೆ ಎಂಬಾತರ ರೈತರಿಗೆ ಸೇರಿದ ಜಮೀನು.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
