Vijaypura

ಪಟ್ಟು ಬಿಡದ ರೈತ ಹುಲಿಗಳು; ಜಂಜಾಟದಲ್ಲಿ ಬಿದ್ದ ಕಾರ್ಖಾನೆಗಳು

Share

 

ವಿಜಯಪುರ… ಪ್ರತಿ ಟನ್ ಕಬ್ಬಿಗೆ 3300 ರುಪಾಯಿ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ಆದ್ರೆ ವಿಜಯಪುರ ಜಿಲ್ಲೆಯ ಆಲಮೇಲ್ ಕೆಪಿಆರ್ ಹಾಗೂ ನಾದ ಕೆ‌.ಡಿಯ ಜಮಖಂಡಿ ಶುಗರ್ಸ್ ದರ ಘೋಷಣೆ ಮಾಡದೆ ಯಡವಟ್ಟು ಮಾಡಿಕೊಂಡಿವೆ. ಪರಿಣಾಮ ಇಂಡಿ ಹಾಗೂ ಆಲಮೇಲ ತಾಲೂಕಿನಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಇನ್ನೂ ಪ್ರತಿಭಟನೆಗೆ ರೈತ ಹೋರಾಟಕ್ಕೆ ಚೂನಪ್ಪ ಪೂಜಾರ್ ಬೆಂಬಲ ನೀಡಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರೆದಿದೆ. ಇಂದು ಸಾಯಂಕಾಲದೊಳಗಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯುವ ಸಾಧ್ಯತೆಗಳಿವೆ ಈ ಕುರಿತು ಇಲ್ಲಿದೆ ಡಿಟೇಲ್ಸ್…

 

ವೈ…ಓ…: ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ಘೋಷಿಸಿದೆ. ವಿಜಯಪುರ ಜಿಲ್ಲೆಯ ಆಲಮೇಲ ಕೆಪಿಆರ್, ಮಲಘಾಣದ ಸಾಯಿ ಬಸವೇಶ್ವರ, ಯರಗಲ್ ಬಿ.ಕೆ ಸಂಗಮನಾಥ ಶುಗರ್ಸ್ ಕಾರ್ಖಾನೆಗಳ ಆಡಳಿತ ಮಂಡಳಿ ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹3,300 ದರ ಲಿಖಿತವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಇಲ್ಲಿಯ ತಾಲ್ಲೂಕು ಪ್ರಜಾಸೌಧ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಹೋರಾಟದ ಸ್ಥಳಕ್ಕೆ ರೈತ ನಾಯಕ ಗುರ್ಲಾಪುರ ರೈತ ಹೋರಾಟದ ಹುಲಿ ಚೂನಪ್ಪ ಪೂಜಾರ್ ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿದ್ದಾರೆ. ಆಲಮೇಲ ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಾಟದ ಸ್ಥಳಕ್ಕೆ ಆಗಮಿಸಿದ ಚೂನಪ್ಪ ಪೂಜಾರ್‌ಗೆ ರೈತರು ಸನ್ಮಾನಿಸಿ ಸ್ವಾಗತಿಸಿಕೊಂಡರು. ಬಳಿಕ ವೇದಿಕೆ ಮೂಲಕ ಕಲಬುರ್ಗಿಯಲ್ಲಿ ನೀಡಲಾಗಿರೊ ದರವನ್ನೆ ವಿಜಯಪುರದಲ್ಲೂ ರೈತರಿಗೆ ನೀಡಬೇಕು. ಕಬ್ಬು ತೂಕದಲ್ಲಿ‌ ಮೋಸ, ದರ ನಿಗದಿಗೆ ಪ್ಯಾಕ್ಟರಿಗಳು ಮಾಡ್ತಿರೊ ವಿಳಂಬ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ರು.

 

ವೈ…ಓ..: ಇನ್ನೂ ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡದಿದ್ರೆ ರಾಜ್ಯ ಬಂದ್ ಮಾಡುವದಾಗಿ ಎಚ್ಚರಿಕೆ ಕೂಡ ಕೊಡಲಾಗಿದೆ. ಆದಷ್ಟು ಬೇಗನೇ ರೈತರಿಗೆ ದರ ನೀಡದೆ ಹೋದ್ರೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಚೂನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೂ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಕಬ್ಬಿನ ಇಳುವರಿ ಹೆಚ್ಚಾಗಿದ್ದು, ಪ್ರತಿ ಟನ್‌ಗೆ 3500 ರೂಪಾಯಿ ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸಿದರು. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಹೆದ್ದಾರಿ ಕೂಡಾ ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವೈ..ಓ..: ಒಟ್ಟಾರೆ ರೈತರು ತಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ. ಇಂದು ಕಲಬುರಗಿ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯ ಬಳಿಕ ಪ್ರತಿಭಟನೆ ಹಿಂಪಡೆಯುವ ಕುರಿತು ರೈತರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!