
ರಿಕವರಿ ಆಧಾರದ ಮೇಲೆ ಸರ್ಕಾರ ನಿಗದಿಪಡಿಸಿದ ದರವನ್ನು ನೀಡಲು 13 ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಸಂಗಪ್ಪ ಹೇಳಿದರು.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ತೀವ್ರಗೊಂಡಿದ್ದ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ (ಡಿಸಿ) ಸಂಗಪ್ಪ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ನಡೆದ ಮಹತ್ವದ ಸಭೆ ನಡೆಯಿತು.
ಮಾಜಿ ಸಚಿವ ಹಾಗೂ ಬೀಳಗಿ ಶುಗರ್ಸ್ ಮಾಲೀಕ ಎಸ್.ಆರ್. ಪಾಟೀಲ್ ಅವರು ಕಾರ್ಖಾನೆ ಮಾಲೀಕರ ಪರವಾಗಿ ಮಾತನಾಡಿ, ಎಫ್.ಆರ್.ಪಿ. ದರಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸಿರುವ ಸರ್ಕಾರದ ಆದೇಶವನ್ನು ‘ಅಕ್ಷರಶಃ ಪಾಲನೆ’ ಮಾಡುವುದಾಗಿ ಹೇಳಿದ್ದಾರೆ. ರನ್ನ ಸಕ್ಕರೆ ಕಾರ್ಖಾನೆ) ಒಂದು ಟನ್‌ಗೆ ₹3117 ಮತ್ತು ಎರಡನೇ ಕಂತಿನಲ್ಲಿ ₹100 ಸೇರಿಸಿ ₹3275 ನೀಡಲು ನಿರ್ಧರಿಸಿದೆ ಎಂದು ಅವರು ವಿವರಿಸಿದರು. ರೈತ ಮುಖಂಡರು ಒತ್ತಾಯಿಸುತ್ತಿರುವ ₹3500 ದರ ನೀಡಲು ಅವರು ಪರೋಕ್ಷವಾಗಿ ನಿರಾಕರಿಸಿದ್ದಾರೆ. ಕಬ್ಬು ಕಟಾವು ವಿಳಂಬವಾದರೆ ರೈತರಿಗೆ ‘ಲಗಾಣಿ’ (ಹೊಸ ಬೆಳೆ ಬಿತ್ತನೆ) ಸಮಸ್ಯೆ ಆಗುವುದರಿಂದ, ರೈತರು ಸಹಕರಿಸಿ ಸರ್ಕಾರ ನಿಗದಿಪಡಿಸಿದ ದರಕ್ಕೆ ಒಪ್ಪಬೇಕು ಎಂದು ಎಸ್.ಆರ್. ಪಾಟೀಲ್ ಅವರು ಮನವಿ ಮಾಡಿದರು. ಮುಂದಿನ ಕ್ರಮಗಳ ಜವಾಬ್ದಾರಿಯನ್ನು ಡಿಸಿ ಹಾಗೂ ಎಸ್.ಪಿ. ಅವರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯ ನಿರ್ಣಯಗಳ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಗಳು, ರಿಕವರಿ ಆಧಾರದ ಮೇಲೆ ಸರ್ಕಾರ ನಿಗದಿಪಡಿಸಿದ ದರವನ್ನು ನೀಡಲು 13 ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಖಾನೆ ಮಾಲೀಕರು ಸರ್ಕಾರದ ಆದೇಶಕ್ಕೆ ಬದ್ಧರಾಗಿದ್ದು, ನಾಳೆಯಿಂದಲೇ ಕಾರ್ಖಾನೆಗಳನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಕಾರ್ಖಾನೆಗಳ ಸುಗಮ ಕಾರ್ಯಾಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಬೈಟ್

