Hukkeri

ಹುಕ್ಕೇರಿ : ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು – ನ್ಯಾಯಾಧೀಶ ರಾಜಣ್ಣ ಸಂಕಣ್ಣವರ,

Share

ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತಾಗಬೇಕು ಎಂದು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.

ಹುಕ್ಕೇರಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ತಾಲೂಕಾ ಆಡಳಿತ ವತಿಯಿಂದ ಜರುಗಿದ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣದಣವರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಸಿವ್ಹಿಲ್ ನ್ಯಾಯಾಧೀಶ ಆದಿತ್ಯ ಕಲಾಲ ,ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಉಪಾಧ್ಯಕ್ಷ ಬಿ ಎಂ ಜಿನರಾಳೆ,ಅಪರ ಸರಕಾರಿ ವಕೀಲ ಎ ಸಿ ಕರೋಶಿ, ತಹಸಿಲ್ದಾರ ಬಲರಾಮ ಕಟ್ಟಿಮನಿ, ಪಿ ಎಸ್ ಆಯ್ ಎಚ್ ಕೆ ಪಾಟೀಲ, ವಿಠ್ಠಲ ಗಸ್ತಿ ಉಪಸ್ಥಿತರಿದ್ದರು.
ನ್ಯಾಯಾಧೀಶ ಸಂಕಣ್ಣವರ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವ ದೃಷ್ಟಿಯಿಂದ ದೇಶದಲ್ಲಿ ವಿವಿಧ ಹಂತಗಳಲ್ಲಿ ಉಚಿತವಾಗಿ ನ್ಯಾಯ ಸಿಗುವ ಸೌಲಭ್ಯಗಳನ್ನು ಸರಕಾರ ವದಗಿಸಲಾಗಿದೆ ಅವುಗಳನ್ನು ನಮ್ಮ ಕಾನೂನು ಸೇವಾ ಸಮಿತಿಗಳ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ ಕಾರಣ ಜನರಲ್ಲಿ ಜಾಗ್ರತ ಮೂಡಿಸುವ ಉದ್ದೇಶದಿಂದ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ ಎಂದರು

ರಾಜ್ಯ ಮಟ್ಟದ ನ್ಯಾಯಾಲಯದಲ್ಲಿ ಪುರಸ್ಕಾರ ಪಡೆದ ನ್ಯಾಯದೇವತೆಯ ಚಿತ್ರ ಬಿಡಿಸಿದ ಕಲಾ ಶಿಕ್ಷಕ ಎಸ್ ಜಿ ಬಿಜಾಪೂರೆ ಇವರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ನ್ಯಾಯಾಧೀಶ ಆದಿತ್ಯಾ ಕಲಾಲ ಮಾತನಾಡಿ ಸಂವಿಧಾನದ ಅಡಿಯಲ್ಲಿ ಸಿಗುವ ನ್ಯಾಯವನ್ನು ಪಡೆಯಲು ನ್ಯಾಯವಾದಿಗಳ ಹೋರಾಟ ಮನೋಭಾವ ಪ್ರಾಮುಖ್ಯತೆ ವಹಿಸುತ್ತದೆ ಇದರ ಜೋತೆಗೆ ಮಾಧ್ಯಮಗಳ ಸಹಕಾರ ಅವಶ್ಯವಾಗಿದೆ ಎಂದರು
ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ ಮಾತನಾಡಿ ನಾವು ಪರಿಸರದಿಂದ ಗಾಳಿ,ನೀರು ,ಬೆಳಕು ಪಡೆಯುತ್ತವೆ ಅದರಂತೆ ಬಡ ಜನರಿಗೂ ಉಚಿತವಾಗಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಸಮಿತಿಗಳನ್ನು ರಚಿಸಲಾಗಿದೆ ಇದರ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಾಮಚಂದ್ರ ಜೋಶಿ, ಎಸ್ ಸಿ ತೇಲಿ, ಲಾವಣ್ಯ ಸಂಸುದ್ದಿ, ಬಸವರಾಜ ಹುಂಡೆಕಾರ,ಎಸ್ ಎ ಎಗನ್ನವರ, ಸಿ ಡಿ ಪಿ ಓ ಎಚ್ ಹೋಳೆಪ್ಪ, ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!