Dharwad

ಅಕ್ರಮ ಗೋಗಳ ಸಾಗಟ ವಿರುದ್ಧ ಧಾರವಾಡ ಬಜರಂಗದಳ ಭರ್ಜರಿ ಕಾರ್ಯಾಚರಣೆ….. ಕ್ಯಾಟರ್ ಚಾಲಕ ಸಮೇತ ಗೋ ತುಂಬಿದ ಲಾರಿ ಪೊಲೀಸರಿಗೆ ಹಸ್ತಾಂತರ.

Share

ಧಾರವಾಡ: ಕ್ಯಾಂಟ‌ರ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿ ಚಾಲಕನ ಸಮೇತ ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿಯ ರಮ್ಯಾ ರೆಸಿಡೆನ್ಸಿ ಹತ್ತಿರ ನಡೆದಿದೆ.

ಸೋಮವಾರ ತಡ ರಾತ್ರಿ ಧಾರವಾಡದ ಬೈಪಾಸ್‌ ರಸ್ತೆಯಲ್ಲಿರುವ ರಮ್ಯ ರೆಸೆಡೆನ್ಸಿ ಹತ್ತಿರ ಈ ಕ್ಯಾಂಟರ್ ವಾಹನವನ್ನು ಬಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ಅದರಲ್ಲಿ ಗೋವುಗಳನ್ನು ಇದ್ದಿದ್ದು ಕಂಡು ಬಂದ ತಕ್ಷಣ ಅವುಗಳನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳಗಾವಿಯಿಂದ ಹೈದರಾಬಾದ್‌ಗೆ ಈ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಾರು 34 ಜಾನುವಾರುಗಳನ್ನು ಈ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಬೆಳಗಾವಿ ಮೂಲದ ಅಯೂಬ್ ಖಾನ್ ಎಂಬಾತನ ಸೂಚನೆ ಮೇರೆಗೆ ಈ ಗೋವುಗಳನ್ನು ಹೈದರಾಬಾದ್‌ಗೆ ಸಾಗಿಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕು ಜನರನ್ನು ಪೊಲೀಸರು ವಶಕೆ ಪಡೆದಿದಾರೆ

Tags:

khanapur cow
error: Content is protected !!