



ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆಯೊಂದಿಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಬೆಳಗಾವಿಯ ಡಿ.ಕೆ.ಹೆರೇಕರ ಜ್ಯುವೆಲರ್ಸ್’ನ ವಾರ್ಷಿಕೋತ್ಸವದ ನಿಮಿತ್ಯ ಆಯೋಜಿಸಿದ್ದ ದಸರಾ ಮತ್ತು ದೀಪಾವಳಿ ಮೆಗಾ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಂಪರ್ ಬಹುಮಾನವನ್ನು ಗೆದ್ದ ಗ್ರಾಹಕರು ಹರ್ಷ ವ್ಯಕ್ತಪಡಿಸಿದರು.
ಹೌದು, ಬೆಳಗಾವಿಗರಿಗೆ ಅತ್ಯಂತ ಒಳ್ಳೆಯ ಚಿನ್ನಾಭರಣಗಳನ್ನು ನೀಡುತ್ತ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಕಾರಣವಾದ ಬೆಳಗಾವಿಯ ಡಿ.ಕೆ.ಹೆರೇಕರ ಜ್ಯುವೆಲರ್ಸ್’ನ ವಾರ್ಷಿಕೋತ್ಸವದ ನಿಮಿತ್ಯ ದಸರಾ ಮತ್ತು ದೀಪಾವಳಿ ಮೆಗಾ ಲಕ್ಕಿ ಡ್ರಾ ಆಯೋಜಿಸಿತ್ತು. ಸಾವಿರಾರು ಗ್ರಾಹಕರು ಇದರಲ್ಲಿ ಭಾಗಿಯಾಗಿದ್ಧರು. ಇದರಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಭಾನುವಾರ ಸಂಜೆ ಬೆಳಗಾವಿಯಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬಿ.ಎಸ್.ಸಿ. ದಿ ಟೆಕ್ಸಟೈಲ್ ಮಾಲ್’ನ ಸಂಚಾಲಕರಾದ ಚಂದ್ರಶೇಖರ್, ಉಪಮಹಾಪೌರರಾದ ವಾಣಿ ಜೋಶಿ, ರಾಮನಾಥ ಚೋದನಕರ, ಹೇರೆಕರ ಜ್ವೇಲರ್ಸನ ಸಂಚಾಲಕರಾದ ದಿಲೀಪ ಹೇರೆಕರ, ಅತುಲ್ ಹೇರೆಕರ, ಓಂಕಾರ ಹೇರೆಕರ, ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಉಪಮಹಾಪೌರರಾದ ವಾಣಿ ಜೋಷಿ ಅವರು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಹೇರೆಕರ ಅವರ ವಿಶ್ವಾಸಾರ್ಹ ಸೇವೆ ಬಹುದಿನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರ ತಂದೆಯವರ ಸೇವೆಯನ್ನು ಅವರ ಮಕ್ಕಳು ಈಗ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಗೆದ್ದವರೊಂದಿಗೆ ಸೋತವರಿಗೂ ಕೂಡ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಕ್ಕೆ ಅಭಿನಂದನೆಗಳು ಎಂದರು.
ಇನ್ನು ಬಿ.ಎಸ್.ಸಿ. ದಿ ಟೆಕ್ಸಟೈಲ್ ಮಾಲ್’ನ ಸಂಚಾಲಕರಾದ ಚಂದ್ರಶೇಖರ್ ಅವರು, ಚಿನ್ನವನ್ನು ಖರೀದಿಸುವುದು ಕೇವಲ ಹೆಣ್ಣು ಮಕ್ಕಳ ಶೃಂಗಾರಕ್ಕೆಂದು ಅಲ್ಲ. ಚಿನ್ನ ಖರೀದಿ ಈಗೀನ ಕಾಲದಲ್ಲಿ ಒಂದು ಉಳಿತಾಯದ ಮೂಲವಾಗಿದೆ. ಇದಕ್ಕೆ ಹೇರೆಕರ ಅವರು ಪೂರಕ ಸೇವೆಯನ್ನು ನೀಡುತ್ತಿದ್ದಾರೆ. ವಿವಿಧ ಪ್ರಕಾರದ ಡಿಸೈನ್ ಮತ್ತು ವೈರೈಟಿಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿನ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆಯನ್ನು ನೀಡುವುದರ ಜೊತೆಗೆ ಗ್ರಾಹಕರಿಗೆ ಆಕರ್ಷಕ ಬಹುಮಾನವನ್ನು ನೀಡಲು ಈ ಉಪಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಗ್ರಾಹಕರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೇರೆಕರ ಜ್ವೇಲರ್ಸನ ಮೂರನೇ ಶಾಖೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತಿದ್ದು, ಮುಂದಿನ ಬಾರಿಯೂ ಗ್ರಾಹಕರ ಬೆಂಬಲ ಇದೇ ರೀತಿಯಾಗಿರಲಿ ಎಂದು ಪ್ರಿತಮ್ ಚೋದನಕರ ಆಶೀಸಿದರು.
10 ಫ್ರೆಶರ್ ಕೂಕರ್, 2 ಫ್ಯಾನ್ಸ್, 5 ಟ್ಯಾವೆಲಿಂಗ್ ಬ್ಯಾಗ್ಸ್, 2 ಏರ್ ಫೈರ್ಸ್, 2 ಓವನ್, 32 ಇಂಚ್’ನ 2 ಟಿವ್ಹಿಗಳು, ಮೊಬೈಲ್ ಫೋನ್ಸ್, 43 ಇಂಚಿನ ಎಲ್.ಇ.ಡಿ ಟಿವ್ಹಿ, ವಾಷಿಂಗ್ ಮಷೀನ್, ಫ್ರಿಜ್, 55 ಇಂಚಿನ ಟಿವ್ಹಿ, ಬಂಪರ್ ಬಹುಮಾನ ಬೈಕಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.
ಮೊದಲ ಬಹುಮಾನ ಸ್ಕೂಟಿ ಹಿರೋ ಡಿಸನಿಟಿಯನ್ನು ಪ್ರಜೋತ ಗಾಢೆಕರ ಅವರು ಗೆದ್ದರು. 2ನೇ ಬಹುಮಾನ 55 ಇಂಚ್ ಎಲ್.ಇ.ಡಿ ಟಿವ್ಹಿಯನ್ನು ಅಮರ್ ಚೌಧರಿ ಅವರು ತಮ್ಮದಾಗಿಸಿಕೊಂಡರು. ಮೂರನೇ ಬಹುಮಾನ 270 ಲೀಟರ್’ನ ಡಬಲ್ ಡೋರ್ ರೆಫ್ರೆಜಿರೇಟರ್’ನ್ನು ಡಾ. ಅರುಣ ಶೆಟ್ಟಿ ಅವರು ಗೆದ್ದುಕೊಂಡರು. ಇನ್ನು ನಾಲ್ಕನೇ ಬಹುಮಾನ ವಾಷಿಂಗ್ ಮಷೀನನ್ನು ಮನಾಲಿ ಹಂಡೆ ಅವರು ತಮ್ಮದಾಗಿಸಿಕೊಂಡರು. ತಮಗೆ ಈ ಅವಕಾಶ ನೀಡಿದ ಮತ್ತು ತಮಗೆ ಬಹುಮಾನ ನೀಡಿದ್ದಕ್ಕೆ ಸ್ಪರ್ಧಾಳುಗಳು ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಲಕ್ಕಿ ಡ್ರಾದಲ್ಲಿ ಭಾಗಿಯಾದ ಪ್ರತಿ ಗ್ರಾಹಕರಿಗೂ ಗಿಫ್ಟ್ ಜೊತೆಗೆ 500 ರೂಪಾಯಿಯ ವೋಚರ್ ಕಾರ್ಡನ್ನು ಸಮಾಧಾನಕಾರಕ ಬಹುಮಾನವಾಗಿ ನೀಡಲಾಯಿತು.

