ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಶಾಸಕ ರಾಜು ಕಾಗೆ ಹೇಳಿಕೆಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯ ಮಾತನಾಡಿ ಹೋರಾಟ ಸಮಿತಿಯ ಸದಸ್ಯರು ಹಲವು ದಶಕಗಳಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗಬೇಕೆಂದು ಹೋರಾಟ ನಡೆಯುತ್ತಿವೆ.ಎಷ್ಟೋ ಸರ್ಕಾರ ಬಂದೂ ಹೋದರೂ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಆಸಕ್ತಿ ತೋರುತ್ತಿಲ್ಲ.ಈ ಕಾರಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ,ಚಿಕ್ಕೋಡಿ ಕೂಡಾ ಜಿಲ್ಲೆ ಆಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ ಹೇಳಿದರು.
ಬಳಿಕ ಜಿಲ್ಲಾ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಶಾಸಕ ಕಾಗೆ ಪ್ರತ್ಯೇಕ ರಾಜ್ಯದ ಕುರಿತು ಹೇಳಿಕೆಯು ಸ್ವಾಗಾತಾರ್ಹ.ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಆಗುತ್ತಿದೆ.ದಕ್ಷಿಣ ಕರ್ನಾಟಕದಲ್ಲಿ ೧೦ ಕಿಮೀ ಗೊಂದು ಜಿಲ್ಲೆ ಇವೆ.ಆದ್ರೆ ಬೆಳಗಾವಿ ಜಿಲ್ಲೆಯು ಇಷ್ಟೊಂದು ದೊಡ್ಡದು ಇದ್ರು ಕೂಡಾ ಯಾಕೆ ವಿಭಜನೆ ಆಗುತ್ತಿಲ್ಲ.ಈ ಕಾರಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಈ ಸಂದರ್ಭದಲ್ಲಿ ರುದ್ರಯ್ಯ ಹಿರೇಮಠ, ಅಮೂಲ ನಾವಿ,ಸಿದ್ರಾಮ ಕರಗಾವೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

