KHANAPUR

ಖಾನಾಪೂರ ಸಿಡಿಪಿಓ ತನ್ನ ಕಛೇರಿಯಲ್ಲಿ ಇರುವುದೇ ಇಲ್ಲ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಸದಸ್ಯರಿಂದ ಕಛೇರಿಗೆ ಭೇಟಿ ಆಕ್ರೋಶ

Share

-ಖಾನಾಪೂರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಒಂದು ವಾರದಿಂದ ತಮ್ಮ ಕಛೇರಿಗೆ ಬಂದಿಲ್ಲ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಗೂ ಬರುವುದಿಲ್ಲ ಇದರ ಬಗ್ಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಸದಸ್ಯರಾದ ಇಸಾಕ್ ಖಾನ್ ಪಠಾಣ್, ಪ್ರಕಾಶ್ ಮಾದಾರ ಅವರು ಸಿಡಿಪಿಓ ಕಛೇರಿಗೆ ಭೇಟಿ ನೀಡಿ ವಿಚಾರಣೆ ಮಾಡಿದರೆ ಆಫೀಸಿನಲ್ಲಿ ಇದ್ದ ಸಿಬ್ಬಂದಿ ವರ್ಗದವರು ಸರ್ ಅಲ್ಲಿ ಹೋಗಿದ್ದಾರೆ ಇಲ್ಲಿ ಹೋಗಿದ್ದಾರೆ ಎಂದು ಹಾರೈಕೆ ಉತ್ತರಗಳನ್ನು ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸೂರ್ಯಕಾಂತ ಕುಲಕರ್ಣಿ ಸೇರಿದಂತೆ ಸದಸ್ಯರಿಂದ ಅವರ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿರುವ ಬಗ್ಗೆ ಕೇಳಿದರು ಕೂಡಾ ಇದ್ದ ಸಿಬ್ಬಂದಿ ವರ್ಗದವರು ಇದಕ್ಕೂ ಕೂಡಾ ಇದು ಸರ್ಕಾರಿ ದಾಖಲೆಗಳು ಹೀಗೆ

 

ನೀಡಲು ತೋರಿಸಲು ಬರುವುದಿಲ್ಲ ಎಂದು ಇದಕ್ಕೂ ಕೂಡಾ ಜಾರಿಕೊಂಡರು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಇನ್ನಿತರ ಸದಸ್ಯರು ಒಂದು ವಾರದಿಂದ ಒಟ್ಟಾರೆ ಸಿಡಿಪಿಓ ಅವರು ತಮ್ಮ ಕಚೇರಿಯಲ್ಲಿ ಇಲ್ಲವೇ ಇಲ್ಲ ನಾವು ಪ್ರತಿದಿನವೂ ಗಮನಿಸುತ್ತಿದ್ದು ಅವರು ಕಛೇರಿಯಲ್ಲಿ ಇಲ್ಲವೇ ಇಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಪ್ರಕಾಶ್ ಮಾದಾರ , ರಾಮಚಂದ್ರ ಪಾಟೀಲ್ ಅವರು ಆಕ್ರೋಶ ವ್ಯಕ್ತಪಡಿಸಿದರು ಸಿಡಿಪಿಓ ಲಕ್ಷ್ಮಣ್ ಭಜಂತ್ರಿ ಅವರು ತಮ್ಮ ಕಚೇರಿಗೆ ಬಾರದೆ ಇರುವ ಬಗ್ಗೆ ಈ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ

ಸದಸ್ಯರು ಮಾಡಿದರು ಎಸಿಡಿಪಿಓ ಶಾರದಾ ಮರಾಠೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಹಾರೈಕೆ ಉತ್ತರಗಳನ್ನು ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಡಿ ಅವರು ಖಾನಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳುವಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದವರು ಆಗ್ರಹಿಸಿದ್ದಾರೆ

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!