ಭಾರತದ ಭವಿಷ್ಯತ್ತಿನ ಏಳ್ಗೆಗಾಗಿ ಸಂವಿಧಾನ ಅಂಗಿಕಾರವಾಗಿದೆ ಎಂದು ಹುಕ್ಕೇರಿ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಹೇಳಿದರು.
ಭಾರದತ ಸಂವಿಧಾನ ದಿನ ಅಂಗವಾಗಿ ಹುಕ್ಕೇರಿ ನಗರದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನ ಜಾಗ್ರತೆ ಜಾಥಾವು ಪಟ್ಟಣದ ವಿವಿಧ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕೋರ್ಟ ಸರ್ಕಲ್ ಹತ್ತಿರ ಡಾ, ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಸ್ವಾತಂತ್ರ್ಯ ನಂತರ ಭಾರತದ ಭವಿಷ್ಯತ್ತಿನ ಏಳ್ಗೆಗಾಗಿ ಡಾ, ಬಾಬಾಸಾಹೇಬ ನೇತೃತ್ವದ ಸಮಿತಿ ದೇಶಕ್ಕೆ ಸಂವಿಧಾನ ನೀಡುವ ಮೂಲಕ ಜಾತಿ ಮತ ಬೇಧ ಪಂತ ಪಂಗಡಗಳಿಗೆ ನ್ಯಾಯ ದೊರಕಿಸುವ ಸಂವಿಧಾನದ ಅಂಗಿಕರಣ ದಿನವನ್ನು ನಾವು ಇಂದು ಸಂಭ್ರಮದಿಂದ ಆಚರಿಸುತ್ತಿದ್ದೆವೆ ಎಂದರು.
ನಂತರ ನಡೆದ ಸಮಾರಂಭದಲ್ಲಿ ಪ್ರೋ ಪರಪ್ಪ ಕೋಣ್ಣೂರ ರವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕರೆಪ್ಪಾ ಗುಡೆನ್ನವರ, ರಮೇಶ ಹುಂಜಿ, ಉದಯ ಹುಕ್ಕೇರಿ, ಬಹುಸಾಹೇಬ ಪಾಂಡ್ರೆ, ಬಿ ಇ ಓ ಪ್ರಭಾವತಿ ಪಾಟೀಲ, ಅಕ್ಷರ ದಾಸೋಹ ನಿರ್ದೆಶಕಿ ಸವಿತಾ ಹಲಕಿ, ಪರಿಶಿಷ್ಟ ವರ್ಗಗಳ ಅಧಿಕಾರಿ ಮಹೇಶ ಭಜಂತ್ರಿ, ಬಿ ಸಿ ಎಂ ಅಧಿಕಾರಿ ಮಹೇಶ ದೇವಪ್ಪಗೋಳ, ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಶಿವಾನಂದ ಶೆಟ್ಟೆನ್ನವರ, ಎಲ್ ಬಿ ಮಾಲದಾರ, ಎಸ್ ಕೆ ಮಾಲಗತ್ತಿಮಠ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Hukkeri
ಭಾರತದ ಏಳ್ಗೆಗಾಗಿ ಸಂವಿಧಾನ ಅಂಗಿಕಾರ – ಗುರುಶಾಂತ ಪಾವಟೆ.

