Belagavi

ಬೆಳಗಾವಿ: ಜೂಜು, ಮಟ್ಕಾ ಮತ್ತು ಮಾದಕ ವಸ್ತು ಸೇವನೆ ವಿರುದ್ಧ ಪೊಲೀಸರ ಬಿಗಿ ಕ್ರಮ; ಒಟ್ಟು 9 ಜನ ವಶಕ್ಕೆ!

Share

ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ನವೆಂಬರ್ 17, 2025 ರಂದು ಜೂಜಾಟ, ಮಟ್ಕಾ ಮತ್ತು ಮಾದಕ ವಸ್ತು ಸೇವನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಹಾಪೂರ ಠಾಣೆಯಿಂದ ಜೂಜಾಟದ ಮೇಲೆ ದಾಳಿ 5 ಜನರ ಬಂಧನ ಶಹಾಪೂರ ಠಾಣಾ ಪಿಎಸ್ಐ ಎಸ್.ಎನ್. ಬಸವ್ವಾ ಮತ್ತು ಸಿಬ್ಬಂದಿ ವರ್ಗದವರು ಹಳೆ ಬೆಳಗಾವಿ ಸ್ಮಶಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ‘ಅಂದರ್ ಬಾಹರ್’ ಎಂಬ ಜೂಜಾಟ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತ ಆರೋಪಿಗಳುಹಮೀದ ಇನುಶಾ ಕಾಗವ ಮೊಲೆನ್ ಅಬ್ದುಲಖಾದರ ಸದರಸೊಫಾ ಉಮೇಶ ಕಲ್ಲಪ್ಪಾ ಕನ್ನುಕರ ರಾಹುಲ ಬಾಬು ಹೊಸುರಕರ ಉತ್ತಮ ಮನೋಹರ ಭರಾಟೆ ವಶಪಡಿಸಿಕೊಂಡ ವಸ್ತುಗಳು ರೂ.8,150 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಪೊಲೀಸರಿಂದ ಮಟ್ಕಾ ದಾಳಿ ಓರ್ವ ಆರೋಪಿಯ ಸೆರೆ ಸಿಸಿಬಿ ವಿಭಾಗದ ಪಿಎಸ್ಐ ಮಂಜುನಾಥ ಸಿ. ಭಜಂತ್ರಿ ಮತ್ತು ಸಿಬ್ಬಂದಿಯವರು ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಯಡಿಯೂರಪ್ಪ ರಸ್ತೆಯ ದತ್ತ ಪ್ರಸಾದ ಧಾಬಾ ಹತ್ತಿರ ದಾಳಿ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ‘ಕಲ್ಯಾಣ ಮಟ್ಕಾ’ ಎಂಬ ಓಸಿ ಜೂಜಾಟದಲ್ಲಿ ತೊಡಗಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಾಹುಲ ಮನೋಹರ ಹಲಗೆಕರ ವಶಪಡಿಸಿಕೊಂಡ ವಸ್ತುಗಳು ರೂ.10,080 ನಗದು ಹಣ ಮತ್ತು ಓಸಿ ಚೀಟಿಗಳು. ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾರ್ಕೆಟ್ ಠಾಣೆ ಪೊಲೀಸರಿಂದ ಗಾಂಜಾ ಸೇವಕರಿಗೆ ಬಲೆ 3 ಜನ ಬಂಧನ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ಶಿವಾಜಿ ನಗರದ ವಿವಿಧ ಕ್ರಾಸ್ಗಳ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ಪದಾರ್ಥ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಈ ಕುರಿತು ಆರೋಪಿಗಳಿಂದ ಒಟ್ಟು ರೂ. 18,230 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆಯನ್ನು ಮುಂದುವರಿಸಲಾಗಿದೆ

Tags:

error: Content is protected !!