ಸ್ವ-ಸಹಾಯ ಸಂಘದ ಮೂಲಕ ಬಡವರು, ಆರ್ಥಿಕವಾಗಿ ಹಿಂದುಳಿದವರ ಬದುಕಿನಲ್ಲಿ ಬದಲಾವಣೆ ಆಗಿದೆ.ನಾಲ್ಕು ಗೋಡೆಯೊಳಗೆ ಸೀಮಿತವಾಗಿದ್ದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ.ಮಹಿಳೆಯರು ಪಡೆದ ಸಾಲವನ್ನು ಪ್ರಾಮಾಣಿಕತೆಯಿಂದ ಮರುಪಾವತಿ ಮಾಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಬದ್ಧತೆ ನೀಡಿದ ಸಂಸ್ಥೆಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಧ್ಯವಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ (ರಿ) ಖಾಸಭಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಡಗಾವಿ ವಲಯ ಇವರ ಸಹಯೋಗದಲ್ಲಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ರವರು ಮಾತನಾಡಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಕಥೆಗಳನ್ನು ನಮ್ಮ ಮಕ್ಕಳಿಗೆ ಬೋಧನೆ ಮಾಡುವ ಅಗತ್ಯವಿದೆ.ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ,ಆಚಾರ-ವಿಚಾರ ಹೇಳಿಕೊಡಬೇಕಾದ ತಾಯಂದಿರೆ ಮಕ್ಕಳ ಕೈಗೆ ಮೊಬೈಲ್ ನೀಡುತ್ತಿದ್ದಾರೆ.ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಜ್ಜನರು ಸೇರಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕಾಗಿದೆ.ಸಂಘಗಳು ಬಡವರ ಬ್ಯಾಂಕ್ ಆಗಿದ್ದು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಸಂಘದ ಪಂಚ ಸೂತ್ರ ಪಾಲಿಸಿಕೊಂಡು ಹೋದಲ್ಲಿ ಸಂಘಗಳೇ ಅಕ್ಷಯ ಪಾತ್ರೆಯಾಗಲಿದೆ ಎಂದು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಬಸವರಾಜ ದೇವರು ಬೃಹನ್ಮಠ ಹೊನ್ನಿಹಾಳ ಇವರು ಮಾತನಾಡಿ ಸಂಘಗಳನ್ನು ಹಾಳು ಮಾಡಲು ಯಾರೇ ಪ್ರಯತ್ನ ಪಟ್ಟರೂ ಕಾಪಾಡಲು ಸಾಕ್ಷಾತ್ ಮಂಜುನಾಥ ಸ್ವಾಮಿಯಿದ್ದಾನೆ.ಕುಟುಂಬವನ್ನು ಬೆಳಗಿದ ಸಂಘ ಇದಾಗಿದ್ದು ಕುಟುಂಬದವರೆಲ್ಲ ಸೇರಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಕಾರ್ಯಕ್ರಮಕ್ಕೆ ಅರ್ಥಬರಲಿದೆ.ಸತ್ಯ ಧರ್ಮ ನ್ಯಾಯ ನಿಷ್ಠೆ ಪ್ರಾಮಾಣಿಕತೆಯಿಂದ ಅನ್ಯರಿಗೆ ಕೇಡು ಬಯಸದೆ ಬದುಕುವುದೇ ಪ್ರತಿಯೊಬ್ಬರ ಸಾಧನೆಯಾಗಬೇಕು. ಸತ್ ಚಿಂತನೆ, ಸತ್ ಚಾರಿತ್ಯ, ಸತ್ ವಿಚಾರಗಳನ್ನು ಅಳವಡಿಸಿಕೊಂಡು ಇಂತಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲಿ ಮಾತ್ರ ಅದು ಭಕ್ತಿಯ, ಧರ್ಮದ ಕಾರ್ಯಕ್ರಮವಾಗಲಿದೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷರಾದ ರಂಗಪ್ಪ ತೆಗ್ಗಿ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ವಕೀಲರು ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಿ.ಆರ್.ಸೊನೇರ,ನಗರಸೇವಕರಾದ ರೇಷ್ಮಾ ಕಾಮಕರ,ರೂಪಾಲಿ ಟೋಪಗಿ,ದೀಪಾ ಕಾಮಕರ,ಕರ್ನಾಟಕ ರಾಜ್ಯ ನೇಕಾರರ ಸಮುದಾಯದ ಅಧ್ಯಕ್ಷರಾದ ಗಜಾನನ ಶಂಕರ್ ಗುಂಜೇರಿ, ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ಹೊನ್ನಳ್ಳಿ ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ಸುಭಾಷ್ ಪಿ.ಸಿ ಸ್ವಾಗತಿಸಿದರು,ಮೇಲ್ವಿಚಾರಕ ಉಮೇಶ ಗೌಡ ವಂದಿಸಿದರು.ಭರತ ಕುಮಾರ್ ನಿರೂಪಿಸಿದರು.ಸೇವಾಪ್ರತಿನಿಧಿಗಳಾದ ರೇಖಾ,ವಂದನಾ ಸಂಘದ ಸದಸ್ಯರು ಭಾಗವಹಿಸಿದ್ದರು

