ಹಳೇ ದ್ವೇಷದ ಹಿನ್ನಲೆ ಹುಬ್ಬಳ್ಳಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಮಂಟೂರ್ ರೋಡ್ ನಲ್ಲಿ ನಿನ್ನೆ ರಾತ್ರಿ ವೇಳೆ ಮಲ್ಲಿಕಜಾನ್ ಎಂಬ ಯುವಕ ಹಾಗೂ ಆತನ ಸ್ನೇಹಿತ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗ್ಯಾಂಗ್ ಅಟ್ಯಾಕ್ ಮಾಡಿ. ಮಲ್ಲಿಕ್ ಗೆ ಚಾಕು ಇರಿದಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರು ಅಟ್ಟಾಡಿಸಿ ಯುವನನ್ನು ಹಿಡಿದು ಚಾಕು ಹಾಕಿದ್ದು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಚಿಕಿತ್ಸೆ ಫಲಿಸದೇ ಮಲ್ಲಿಕ್ ಮೃತಪಟ್ಟಿದ್ದಾನೆ. ಗಟನೆಯಲ್ಲಿ ಮಲ್ಲಿಕ್ ಸ್ನೇಹಿತ ದಾಳಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಚಾಕು ಇರಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು. ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಭೇಟಿನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಕುರಿತು ಬೆಂಡಿಗೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
hubbali
ಹುಬ್ಬಳ್ಳಿಯಲ್ಲಿ ಹಳೇ ದ್ವೇಷ ಹಿನ್ನಲೆ ಯುವಕನ ಬರ್ಬರ್ ಕೊಲೆ

