ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ೫ ಮನೆಗಳ ಕನ್ನ ಹಾಕಿದ ಘಟನೆ ಕಾಗವಾಡದಲ್ಲಿ ನಡೆದಿದೆ.
ಅದರಲ್ಲಿ ಒಂದು ಮನೆಯಲ್ಲಿ ಎಂಟು ತೊಲೆ ಚಿನ್ನದ ಆಭರಣ ಹಾಗೂ ಹಣ ದೋಚಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಾಗವಾಡದ ಮಾರುಕಟ್ಟೆ ಆವರಣದಲ್ಲಿರುವ ಸವಿತಾ ಮಾಲಗತ್ತೆ ಇವರು ಕೆಲಸದ ನಿಮಿತ್ಯ ಮನೆಗೆ ಬೀಗ ಹಾಕಿ ನೆಂಟರ ಮನೆಗೆ ಹೋಗಿದ್ದರು. ಅಲ್ಲಿಂದ ಬೆಳಿಗ್ಗೆ ಬರುವಾಗ ಮನೆಗೆ ಬೀಗ ಮುರ್ದಿತ್ತು ಇದನ್ನು ಕಂಡು ಮನೆಯಲ್ಲಿ ಹೋಗಿ ನೋಡಿದಾಗ ಅಲ್ಲಿಗೆ ಇರುವ ಎಂಟು ತೊಲೆ ಚಿನ್ನಾಭರಣ ಹಾಗೂ ನಗದಿ ಹಣ ಹೀಗೆ ಸುಮಾರು ೯ ಲಕ್ಷ ಮೌಲ್ಯದ ಕಳ್ಳತನ ನಡೆದಿದೆ.
ಇದೇ ರೀತಿ ಒಂದು ಔಷದ ಅಂಗಡಿ ಬೀಗನ್ನು ಮುರಿದು ಅಲ್ಲಿಗೆ ಇರುವ ೫೦೦ ರೂಪಾಯಿ ಕಳ್ಳತನ ಮಾಡಿದ್ದಾರೆ. ಅಲ್ಲದೆ ಬೇರೆ ಇನ್ನು ಮೂರು ಮನೆಗಳ ಬೀಗ ಮುರಿವ ಪ್ರಯತ್ನದಲ್ಲಿದ್ದಾಗ ಕೆಲವು ಯುವಕರ ಮಾತನಾಡುವ ಸಪ್ಪಳ ಕೇಳಿ ಕಾಲ್ತಿತ್ತಿದ್ದಾರೆ.
ಏಕ ಕಾಲಕ್ಕೆ ಮನೆಗಳ ಕಳ್ಳತನ ಆಗುತ್ತಿರುವುದನ್ನು ಕಂಡು ಇಲ್ಲಿಯ ಜನರು ಕೊಂಡಿದ್ದಾರೆ. ಬೆಳಗಾವಿಯ ಶ್ವಾನದಳ ಹಾಗೂ ಬೆರಳೆಚ್ಚುವ ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆ ಮಾಡಿದರು.
ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಗೊಂಡಿದ್ದು ಪಿಎಸ್ಐ ರಾಘವೇಂದ್ರ ಹಾದಿಮನಿ ತನಿಖೆ ಚುರುಕು ಗೊಳಿಸಿದ್ದಾರೆ.

