Uncategorized

ಡಿಕೆ ಶಿವಕುಮಾರ್ ನವೆಂಬರ್ 21 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಾ??

Share

ಡಿಕೆ ಶಿವಕುಮಾರ್ ಅವರು ನವೆಂಬರ್ 21 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ಎಂಬ ಅಂತೆ ಕಂತೆ ಚರ್ಚೆ ಜೋರಾಗಿದೆ.ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಲೆಮಾರಿಗಳ ಮಹಾಒಕ್ಕೂಟವು ತಮ್ಮ ಭೇಟಿಯಾಗಿ, ತಮಗೆ ಸಿ-ಪ್ರವರ್ಗದಲ್ಲಿ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡಲು ಆಗ್ರಹಿಸಿದೆ. ಅಲ್ಲದೇ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಅಲ್ಲದೇ ಆರ್ಥಿಕ ಯೋಜನೆಗಳನ್ನು ಘೋಷಿಸಲು ಮನವಿ ಮಾಡಿದೆ. ನಮ್ಮ ಸರ್ಕಾರ ಸಾಮಾಜೀಕ ನ್ಯಾಯಪರವಾಗಿದ್ದು, ಶೇ. 1 ರಷ್ಟು ಮೀಸಲಾತಿ ನೀಡಲು ನ್ಯಾಯಾಂಗ ಇಲಾಖೆ ಮತ್ತು ತಜ್ಞರ ಜೊತೆ ಚರ್ಚಿಸಲಾಗುವುದು. ಇದೆಲ್ಲದಕ್ಕೂ ಸಮಯಬೇಕಿದ್ದು, ತಮ್ಮ ಮೇಲೆ ವಿಶ್ವಾಸವಿಡಿ ಎಂದರು.

ಡಿಕೆ ಶಿವಕುಮಾರ್ ಅವರು ನವೆಂಬರ್ 21 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ಎಂಬ ಅಂತೆ ಕಂತೆ ಚರ್ಚೆ ಜೋರಾಗಿದೆ.ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯದ ಜತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿಎಂಗೆ ಡಿಕೆಶಿ ಪದಗ್ರಹಣ ಬಗ್ಗೆ ಪ್ರಶ್ನಿಸಲಾಯ್ತು. ಇದರಿಂದ ಗರಂ ಆದ ಸಿದ್ದರಾಮಯ್ಯ, ಯಾರ್ ಹೇಳಿದ್ದು? ನಿನಗೆ ಯಾರ್ ಹೇಳಿದ್ರು? ನಿನಗೆ ಹೆಂಗೆ ಗೊತ್ತಾಯ್ತು? ಯಾವ ಪತ್ರಿಕೆ? ಯಾಬ ಪತ್ರಿಕೆ ನೋಡಿದೆ ನೀನು? ನಾನು ಎಲ್ಲಾ ಪತ್ರಿಕೆ ಓದುತ್ತೇನೆ. ಯಾವುದರಲ್ಲೂ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಬಳಿಕ ಪತ್ರಿಕೆಯ ಹೆಸರು ಹೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

Tags:

error: Content is protected !!