BELAGAVI

ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಯ ಕಾಲೇಜುಗಳ ಭಾರ ಎತ್ತುವ ಸ್ಪರ್ಧೆ

Share

 

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯಗಳ ಭಾರ ಎತ್ತುವ ಸ್ಪರ್ಧೆಯನ್ನು ಬೆಳಗಾವಿಯ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿನಾಂಕ 24. 10. 2025 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿತು. ವಿವಿಧ ಮಹಾವಿದ್ಯಾಲಯಗಳಿಂದ ಪುರುಷರ ವಿಭಾಗದಲ್ಲಿ 37 ಹಾಗೂ ಮಹಿಳೆಯರ ವಿಭಾಗದಲ್ಲಿ 37 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಚ್. ಐ .ತಿಮ್ಮಾಪೂರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ ಆರೋಗ್ಯವೇ ಭಾಗ್ಯ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯವಾದದ್ದು .ಸದೃಢವಾದ ದೇಹ ಸದೃಢವಾದ ಮನಸ್ಸನ್ನು ಪಡೆದಿರುತ್ತದೆ. ಹೀಗಾಗಿ ಎಲ್ಲರೂ ಕ್ರೀಡೆಗಳಿಗೆ ಮಹತ್ವ ಕೊಟ್ಟು ಭಾಗವಹಿಸಬೇಕು. ಪಾಠದಷ್ಟೇ ಆಟವು ಈಗಿನ ಕಾಲದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ .ಒಳ್ಳೆಯ ಕ್ರೀಡಾಪಟು ಸಮಾಜದಲ್ಲಿ ಗೌರವವನ್ನು ಹಾಗೂ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅನೇಕ ಕ್ರೀಡಾಪಟುಗಳ ಹೆಸರುಗಳನ್ನು ಉದಾರಿಸಿದರು .ನಮ್ಮ ಕ್ರೀಡಾ ದೇಹ ಶಕ್ತಿ ಸ್ಪರ್ಧೆಗಳಿಗೆ ಮಾತ್ರ ಪ್ರಯೋಗವಾಗಬೇಕು. ಸಮಾಜದ ಯಾವುದೇ ಅಹಿತಕರ ಘಟನೆಗಳಿಗೆ ಸ್ಪೂರ್ತಿಯಾಗಬಾರದು ಎಂದರು .ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ತಾವು ಮುಂದಾಗಬೇಕು ಹಾಗೂ ಕ್ರೀಡೆಗಳಲ್ಲಿ ಮುಂದುವರೆದು ದೇಶಕ್ಕೆ ಚಿನ್ನದ ಪದಕಗಳನ್ನು ತರಬೇಕು ಎಂದು ಸ್ಪರ್ದಾಳುಗಳಿಗೆ ಶುಭ ಹಾರೈಸಿದರು .ಸಮಾರಂಭದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಬಿ ಶ್ರೀನಿವಾಸ ಅತಿಥಿಗಳಾಗಿ ಆಗಮಿಸಿದ್ದರು. ಸಮಾರಂಭದಲ್ಲಿ ಆಯ್ಕೆ ಸಮಿತಿಯ ಸದಸ್ಯರಾದ ಶ್ರೀ ರಾಮರಾವ್ ಶಿವರಾಜ್ ಪಾಟೀಲ್ ನಿರ್ಣಾಯಕರಾದ ಸದಾನಂದ ಮಾನಶೆಟ್ಟಿ ವೈಭವಿ ದಡವಿ, ಸದಾ ನಂದ ಬಸವಣ್ಣಚೆ ಹಾಗೂ ಅಂಜುಮನ್ ಕಾಲೇಜ್ ಪ್ರೊ. ಎಸ್ ಎ ಮುಲ್ಲಾ ಡಾ ಇರ್ಫಾನ್ ಶಿಲೆದಾರ್ ಬೀಡಿ, ಶ್ರೀ ಬಾಶುಬಾನ, ಶ್ರೀ ಸೋಹೈಲ್ ಮುಜಾವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದ ನಿರೂಪಣೆಯನ್ನು ಹಾಗೂ ಸ್ವಾಗತವನ್ನು ಶ್ರೀ ಜೆ ಎ.ಜಾಗಿರದಾರ ಮಾಡಿದರು . ವಂದನಾರ್ಪಣೆಯನ್ನು ಉಪ ಪ್ರಾಚಾರ್ಯರಾದ ಡಾ.ಖತೀಬ ಮಾಡಿದರು.

Tags:

error: Content is protected !!