ಚಿಕ್ಕೋಡಿಯಿಂದ ಡಿಸಿಸಿ ಬ್ಯಾಂಕಿಗೆ ಗಣೇಶ ಹುಕ್ಕೇರಿ ಅವಿರೋಧ ಆಯ್ಕೆಯಾಗಿದ್ದು, ರೈತರ ಏಳ್ಗೆಗಾಗಿ ನಾವು ಶ್ರಮಿಸುತ್ತೇವೆ. ನಮ್ಮದು ಯಾವುದೇ ಪೇನಲ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಎಲ್.ಸಿ ಪ್ರಕಾಶ್ ಹುಕ್ಕೇರಿ ಅವರು ನಮ್ಮ ಮೇಲೆ ವಿಶ್ವಾಸವಿಟ್ಟು. ಗಣೇಶ್ ಹುಕ್ಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ರೈತರ ಏಳ್ಗೆಗಾಗಿ ಕೆಲಸ ಮಾಡುತ್ತೇವೆ. ಬೇರೆಯವರು ನಾಮಪತ್ರ ಸಲ್ಲಿಸಬಹುದಿತ್ತು . ಅದು ಅವರಿಗೆ ಬಿಟ್ಟದ್ದು. ನಾವು ಯಾರನ್ನು ತಡೆದಿರಲಿಲ್ಲ ಎಂದರು. ನಮ್ಮದು ಯಾವುದೇ ಪೇನಲ್ ಇಲ್ಲ. ಸ್ವತಂತ್ರವಾಗಿ ನಾವು ಆಯ್ಕೆಯಾಗಿ ಬಂದಿದ್ದೇವೆ ಎಂದರು. ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ನವೆಂಬರ್ ವರೆಗೂ ಕಾಯ್ದು ನೋಡೋಣ ಎಂದರು.