



ಮಾಜಿ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್, 150ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ “ರಾಷ್ಟ್ರೀಯ ಏಕತಾ ದಿನ” ವನ್ನಾಗಿ ಆಚರಣೆ ಹಾಗೂ ‘ಏಕತಾ ಓಟ” ವನ್ನು ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜನೆ ಮಾಡಲಾಗಿತ್ತು. ರಾಷ್ಟ್ರದ ಸ್ವಾತಂತ್ರ್ಯ, ಐಕ್ಯತೆ ಮತ್ತು ಭದ್ರತೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು, ಐ.ಆರ್.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು, ವಿವಿಧ ಶಾಲೆಗಳ ಮಕ್ಕಳೊಂದಿಗೆ “ಏಕತಾ ಓಟ”ದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ನಗರದ ಡಾ॥ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಗಾಂಧಿಚೌಕ ಸರ್ಕಲ್, ಡಾ|| ಬಿ.ಆರ್.ಅಂಬೇಡ್ಕರ್ ಸರ್ಕಲ್ ಮೂಲಕ ಆಗಮಿಸಿದ ಏಕತಾ ಓಟವು ಬಳಿಕ ಗೋಲ್ ಗುಂಬಜ್ ಆವರಣದಲ್ಲಿ ಮುಕ್ತಾಯಗೊಂಡಿತು. ಈ ವೇಳೆ ಸಾಮೂಹಿಕವಾಗಿ “ರಾಷ್ಟ್ರೀಯ ಏಕತಾ ದಿನಾಚರಣೆ” ಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

 
			 
 
 
  
					 
				 
						  
						  
						  
						  
						 
						 
						