ವಿಜಯಪುರ ಅತ್ತ ಮಹಾರಾಷ್ಟ್ರ ರಾಜ್ಯದ ಸುಕ್ಷೇತ್ತ ತುಳಜಾಪುರದಲ್ಲಿ ಜಗನ್ಮಾತೆ ಆರಾಧನೆ ಬಹು ಭಕ್ತಿಯಿಂದ ಭಕ್ತರ ಸಡಗರದ ನಡುವೆ ನಡೆಯುತ್ತಿದೆ. ಆ ಜಗನ್ಮಾತೆ ನೆಲೆಸಿದ್ದು ಮಹಾರಾಷ್ಟ್ರ ರಾಜ್ಯದಲ್ಲಿ ಆದ್ರೂ ಇತ್ತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆ ತಾಯಿಗೆ ಬಹು ಭಕ್ತರಿದ್ದಾರೆ. ಶಿವನ ಸತಿಯಾಗಿರುವ ಪಾರ್ವತಿಯ ಸ್ವರೂಪಿನಿ ಜಗದಂಬೆಗೆ ಜಗತ್ತಿನಲ್ಲೆಲ್ಲಾ ಭಕ್ತರು. ಹೀಗಾಗಿ ತುಳಜಾಪುರ ಸಂಪ್ರದಾಯ ಪಾಲಿಸುವ ಭಕ್ತ ಗಣ ವಿಜಯಪುರದಲ್ಲಿದೆ. ತುಳಜಾಪುರ ಸಂಪ್ರದಾಯ ಪಾಲಿಸುವ ಮೂಲಕ ಜಗನ್ಮಾತೆ ಆರಾಧನೆ ಮಾಡುತ್ತಾ ಬರುತ್ತಿದ್ದಾರೆ. ಇನ್ ನ್ಯೂಜ್ ತಂಡ ಒಂಭತ್ತು ವರ್ಷಗಳ ತುಳಜಾಪುರದ ಪಾದಯಾತ್ರೆ ನಿರಂತರ ವರದಿ ಬಳಿಕ ಈ ವರದಿ ಕೊಡುತ್ತಲೇ ಇದೆ. ಮತ್ತೊಮ್ಮೆ ನಮ್ಮ ವರದಿಗಾರ ವಿಜಯಕುಮಾರ ಸಾರವಾಡ ಕೊಡ್ತಿರೊ ವರದಿ ಇದೆ. ನೋಡೊಣ ಬನ್ನಿ..
ಜಗನ್ಮಾತೆ ತುಳಜಾಭವಾನಿ ದರ್ಶನ ಬಳಿಕ ನಮ್ಮ ವಿಜಯಪುರ ವರದಿಗಾರ ವಿಜಯಕುಮಾರ ಸಾರವಾಡ ವಿಜಯಪುರ ನಗರದಲ್ಲಿ ತುಳಜಾಪುರ ಸಂಪ್ರದಾಯ ಪಾಲಿಸುವ ಭಕ್ತರ ಮಂಡಳಿಗಳ ಕುರಿತು ಪ್ರತಿ ವರ್ಷ ಹೊಸ ವರದಿಗಳನ್ನು ಕೊಡುತ್ತಲೇ ಇರುತ್ತಾರೆ. ಈ ಬಾರಿಯೂ ಕೂಡ ಮತ್ತೊಂದು ವರದಿ ತಂದಿದ್ದಾರೆ. ವಿಜಯಪುರ ನಗರದ ಜೋರಾಪುರ ಪೇಠದ ಹೊಸ ಕುಂಬಾರ ಗಲ್ಲಿಯ ಆದಿಮಾತಾ ಸೇವಾ ಸಂಘ ವು ತುಳಜಾಪುರ ಸಂಪ್ರದಾಯ ಪಾಲಿಸುವ ಮೂಲಕ ಜಗದಂಬೆಯ ಆರಾಧನೆ ಮಾಡುತ್ತಿದ್ದಾರೆ. ಶ್ರೀ ಆದಿಮಾತಾ ಸೇವಾ ಸಂಘದವರು ಪ್ರತಿಷ್ಠಾಪನೆ ಮಾಡುವ ನಾಡದೇವಿ ಮೂರ್ತಿ ಅತಿ ಸುಂದರ ಮೂರ್ತಿ ಎಂಬ ಖ್ಯಾತಿಯನ್ನು ಹೊಂದಿದೆ. ಆರು ಅಡಿ ಎತ್ತರದ ಹಾಗೂ ಎಂಟು ಅಡಿ ಅಗಲದ ಸಿಂಹ ಸವಾರಿ ಮಾಡುತ್ತಿರುವ ನಾಡದೇವಿ ಮೂರ್ತಿ

ನೋಡುಗರ ಕಣ್ಮನ ಸೆಳೆಯುತ್ತದೆ. ಸಿಂಹದ ಸವಾರಿ ಹೊರಟಿರುವ ಜಗನ್ಮಾತೆ ನಿಜವಾಗಿಯೂ ನಮ್ಮನ್ನೆ ನೋಡುತ್ತಿದ್ದಾಳೆ, ಆ ಜಗನ್ಮಾತೆ ನಮ್ಮ ಮುಂದೆಯೇ ಪ್ರತ್ಯಕ್ಷವಾಗಿದ್ದಾಳೇ ಏನೋ ಎನ್ನುವ ಭಾವನೆ ಮೂಡುತ್ತದೆ. ಒಂದು ಕ್ಷಣ ಮೈ ಜುಮ್ಮ ಎನ್ನುವ ಅನುಭವ ನೀಡುತ್ತದೆ. ಕೋಜಗಿರಿ ಹುಣ್ಣಿಮೆಯ ಬಳಿಕ ನಡೆಯುವ ಆಚರಣೆಯು ಬಹು ಖ್ಯಾತಿ ಗಳಿಸಿದೆ. ನವರಾತ್ರಿಯ ಸಂಭ್ರಮದಲ್ಲಿ ಕಾಲೋನಿಯ ಮಹಿಳೆಯರು, ಪುಟಾಣಿಗಳು ಭಾಗವಹಿಸಿ ಸಂಭ್ರಮಿಸಿದ್ದಾರೆ. ದಾಂಡಿಯಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ, ಲಲಿತಾ ಸಹಸ್ರನಾಮ, ದೇವಿ ಪಾರಾಯಣ, ಉಡಿ ತುಂಬುವಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿ ಆರಾಧನೆ ಮಾಡಿದ್ದಾರೆ. ಇಲ್ಲಿ ಮಕ್ಕಳಿಗೆ ಉಡಿ ತುಂಬುವ ಮೂಲಕ ಬಾಲ ದೇವಿಯರನ್ನು ಪೂಜಿಸಲಾಗಿದೆ.

ಇನ್ನೂ ತುಳಜಾಪುರದ ದೇವಸ್ಥಾನದ ಸಂಪ್ರದಾಯ ದಂತೆ ಐದು ದಿನ ಶ್ರಮದ ನಿದ್ರೆಗೆ ಜಾರಿದ ದೇವಿಯನ್ನು ಜಾಗೃತಗೊಳಿಸಿ ಕೃಷ್ಣಾ ನದಿಯ ನೀರನ್ನು ತಂದು ಪೂಜಿಸಿದ್ದಾರೆ. ಜಗನ್ಮಾತೆ ಆರಾಧನೆ ಜೊತೆಗೆ ಪ್ರತಿವರ್ಷದ ಹಾಗೆ 6 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಿಸಿದ್ದಾರೆ. ವಿಜಯಪುರ ಜಿಲ್ಲೆಯ ಜ್ಯೂನಿಯರ್ ವಿಜಯ ಪ್ರಕಾಶ ಎಂದೆ ಖ್ಯಾತಿ ಗಳಿಸಿದ ಸಾಗರ ಬಾಗಲಕೋಟ ತಂಡದ ಗಾಯನದ ಗಾಯನ ಸಿರಿ ಕೇಳಿ ಅನುಭವಿಸಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಮಾತ್ರವಲ್ಲದೆ ಈ ದೇವಿಗಾಗಿಯೇ ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮೂರ್ತಿ ದರ್ಶನಕ್ಕೆ ಹಲವಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

; ಒಟ್ಟಾರೆ. ಕಾಲೋನಿಯ ಜನ ಒಗ್ಗಟ್ಟಿನ ಮಂತ್ರ ಪಠಿಸಿ ನವರಾತ್ರಿ ಸಂಭ್ರಮವನ್ನು ಆನಂದಮಯವಾಗಿ, ಭಕ್ತಿಮಯವಾಗಿ ಆಚರಿಸಿ ಶ್ರದ್ಧೆಯಿಂದ ಆಚರಿಸುತ್ತಾರೆ. ನವರಾತ್ರಿಯ ಸಡಗರ ಮನೆ ಮಾಡಿ ಸೇವೆ ಮಾಡುವ ಮೂಲಕ ಭಕ್ತರು ದೇವಿಯ ಭಕ್ತಿ ಶ್ರದ್ಧೆಯಿಂದ, ನಿರ್ಮಲ ಮನಸ್ಸಿನಿಂದ ಮಾಡುತ್ತಿದ್ದಾರೆ.ಭಕ್ತರು ಜಗನ್ಮಾತೆ ತುಳಜಾಭವಾನಿಯನ್ನು ನಿತ್ಯ ನೆನೆದು ಕೃತಾರ್ಥರಾಗುತ್ತಿದ್ದಾರೆ. ಆ ಜಗನ್ಮಾತೆ ಎಲ್ಲೆಡೆಯೂ ನಾನಿದ್ದಿನಿ ಇದ್ದಿನಿ ಎಂಬ ಸಂಕೇತ ನೀಡುತ್ತಿದ್ದಾಳೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್,
ವಿಜಯಪುರ

