ಸರ್ಕಾರದಲ್ಲಿ ಯಾವುದೇ ಕ್ರಾಂತಿಯಾಗಲ್ಲ. ಅಹಿಂದ್ ನಾಯಕನೇ ಬೇರೆ, ಸಿಎಂ ಹುದ್ಧೆಯೇ ಬೇರೆ. ಎಲ್ಲದ್ದಕ್ಕೂ ಕಾಲ ಕೂಡಿ ಬರಬೇಕೆಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಕಿತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಯಾವುದೇ ಕ್ರಾಂತಿಯಿಲ್ಲ. ಎಲ್ಲವೂ ಸುಗಮವಾಗಿರುತ್ತದೆ. ಯತೀಂದ್ರ ಅವರು ಸಿಎಂ ಆಗಬೇಕೆಂದು ಹೇಳಿಲ್ಲ. ಅಹಿಂದ್ ನೇತೃತ್ವ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಸಿದ್ಧರಾಮಯ್ಯನವರ ನಂತರ ಅಹಿಂದ್ ನಾಯಕತ್ವವನ್ನು ಮುಂದುವರೆಸುವ ಬಗ್ಗೆ ಹೇಳಿದ್ದಾರೆ. ಇದಕ್ಕೂ ಕಾಲ ಬರಬೇಕು. ಜನರು ಅದನ್ನು ಆಯ್ಕೆ ಮಾಡಬೇಕು. ಅಹಿಂದ್ ನಾಯಕನೇ ಬೇರೆ, ಸಿಎಂ ಹುದ್ಧೆಯೇ ಬೇರೆ ಎಂದರು.
ಅಹಿಂದ್ ನಾಯಕನ ಬಗ್ಗೆ ನಮ್ಮ ತಕರಾರಿಲ್ಲ. ಅದನ್ನು ಗಟ್ಟಿಗೊಳಿಸಲು ನಾವು ಪ್ರಯತ್ನಿಸುತ್ತೇವೆ. ನೇತೃತ್ವ ಬದಲಾವಣೆಯಾಗುವುದಿಲ್ಲ. ಬದಲಾವಣೆ ಮಾಡುವುದಾದರೇ, ಅದನ್ನು ಹೈಕಮಾಂಡ್ ಮಾಡಬೇಕಾಗುತ್ತದೆ. ಪಕ್ಷದಲ್ಲಿ ಈ ಕುರಿತು ಯಾವುದೇ ಚರ್ಚೆಯಿಲ್ಲ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಬಹಳಷ್ಟು ನಾಯಕರು ಕೂಡಿ ಆಯ್ಕೆ ಮಾಡುತ್ತಾರೆ ಎಂದರು.