bagalkot

ಮತ್ತೇ ಕೂಡಲಸಂಗಮದಲ್ಲಿ ಸಭೆ ಸೇರಲು ಮುಂದಾದ ಬಸವ ಸಂಸ್ಕೃತಿ ಅಭಿಯಾನದ ಲಿಂಗಾಯತ ಮಠಾಧೀಶರು‌‌‌‌‌…!!!!

Share

ಅತ್ತ ಯತ್ನಾಳ ನೇತೃತ್ವದಲ್ಲಿ ನಿನ್ನೆ ಹಿಂದೂ ಶರಣರ ಸಮಾವೇಶದ ಅಭಿಯಾನಕ್ಕೆ ಪ್ಲ್ಯಾನ್ ಮಾಡಿದ್ದಾರೆ, ಇತ್ತ ಕೂಡಲಸಂಗಮದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಮಠಾಧೀಶರ ಸಭೆ ಮತ್ತು ಔತನಕೂಟ ನಡೆಸಲಾಗುತ್ತಿದೆ. ನವೆಂಬರ್ ೧೧ ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸಭೆ ಮತ್ತು ಔತಣಕೂಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮದ ಬಸವಧರ್ಮಪೀಠದ ಮಾದೇಶ್ವರ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಒಂದು ಕಡೆ ಬಿಜೆಪಿ ಶಾಸಕ ಯತ್ನಾಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ‘ಬಸವ ಶರಣರ ಹಿಂದೂ ಸಮಾವೇಶ’ಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಮತ್ತೊಂದೆಡೆ ಬಸವ ಸಂಸ್ಕೃತಿ ಅಭಿಯಾನದ ಪರ ಇರುವ ಲಿಂಗಾಯತ ಮಠಾಧೀಶರು ನವೆಂಬರ್ ೧೧ ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸಭೆ ಮತ್ತು ಔತಣಕೂಟ ನಡೆಸಲು ಮುಂದಾಗಿದ್ದಾರೆ.ಬಸವ ಧರ್ಮಪೀಠದ ಮಾದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ೨೫೦ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳು ಈ ಔತಣಕೂಟದಲ್ಲಿ ಭಾಗವಹಿಸಲಿದ್ದು, ಈ ವೇಳೆ ಮಹತ್ವದ ಸಭೆ ನಡೆಯಲಿದೆ.

ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ ಈ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಸವಧರ್ಮಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಬಾಲ್ಕಿ ಪಟ್ಟದ ದೇವರು, ನಿಜಗುಣಾನಂದ ಶ್ರೀಗಳು ಸೇರಿದಂತೆ ಪ್ರಮುಖ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಅಂದು ಕೈಗೊಳ್ಳುವ ನಿರ್ಣಯ ಸದ್ಯಕ್ಕೆ ಸಸ್ಪೆನ್ಸ್ ಆಗಿದ್ದು, ಆ ದಿನವೇ ಬಹಿರಂಗವಾಗುವ ಸಾಧ್ಯತೆ ಇದೆ.

ಈ ಮಧ್ಯೆ, ಹಿಂದೆ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹೋಗಬಾರದೆಂದು ವೀರಶೈವ ಲಿಂಗಾಯತ ಶ್ರೀಗಳು ಎಚ್ಚರಿಕೆ ನೀಡಿದ್ದ ವಿಚಾರಕ್ಕೆ ಕೂಡಲಸಂಗಮದ ಮಾದೇಶ್ವರ ಸ್ವಾಮೀಜಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಬಸವಣ್ಣನವರಿಗಾಗಿ ಮಾಡಿದ ಕಾರ್ಯಕ್ರಮಕ್ಕೆ ಹೋಗಬಾರದು ಎನ್ನಲು ಅವರ‍್ಯಾರು? ಸಿಎಂಗೆ ಆದೇಶ ಮಾಡುವುದು ಯಾವ ಸ್ವಾಮೀಜಿಗಳು ಮಾಡಬಾರದು. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಸಿದ್ದರಾಮಯ್ಯ ಅವರು ಬಸವತತ್ವದ ಅನುಯಾಯಿಗಳು. ಸಿಎಂ ಈ ಕಾರ್ಯಕ್ರಮಕ್ಕೆ ಹೋದರೆ ರಾಜಕೀಯವಾಗಿ ತೊಂದರೆಯಾಗುತ್ತದೆ ಎಂಬ ಹೇಳಿಕೆಗಳು ಸುಳ್ಳು. ಮುಂದಿನ ದಿವಸ ಅವರು ಇನ್ನು ಚೆನ್ನಾಗಿ ಇರುತ್ತಾರೆ” ಎಂದು ಮಾದೇಶ್ವರ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!