ಕೆಂಪವಾಡದ ಅಥಣಿ ಫಾರ್ಮರ್ಸ್ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ವತಿಯಿಂದ ೫ ಯೂನಿಟ್‌ಗಳ ಮುಖಾಂತರ ಈ ವರ್ಷ ೪೦ ಲಕ್ಷ ಟನ್ ಕಬ್ಬುನೂರಿಸುವ ಗುರಿ ಹೊಂದಿದ್ದೇವೆ ಎಂದು ಮಾಜಿ ಸಚಿವರು ಹಾಗೂ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ರಂದು ಕಾಗವಾಡದಲ್ಲಿ ಸಕ್ಕರೆ ಕಾರ್ಖಾನೆಯ ಶಾಖೆ ಕಚೇರಿ ಪ್ರಾರಂಭಿಸಿ ರೈತರಿಗೆ ಮಾಹಿತಿ ನೀಡಿದರು.
ಸಕ್ಕರೆ ಕಾರ್ಖಾನೆಯ ಕಬ್ಬುನುರಿಸುವ ಸಾಮರ್ಥ್ಯ ಹೆಚ್ಚಿಸಲಾಗಿದೆ ಪ್ರತಿದಿನ ೧೫ ಸಾವಿರ ಟನ್ ಕಬ್ಬುನುರಿಸಲಾಗುವುದು ಇದರೊಂದಿಗೆ ಪ್ರತಿ ದಿನ ನಾಲ್ಕು ಲಕ್ಷ ಲೀಟರ್ ಇಥೆನಾಲ್ ಉತ್ಪಾದಿಸಲಾಗುವುದು, ಕೋ ಜನರೇಶನ್ ವಿದ್ಯುತ್ ಘಟಕ ಮುಖಾಂತರ ೫೨ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ, ಸಿಬಿಜಿ ಮತ್ತು ಪೊಟ್ಯಾಶ್ ಉತ್ಪಾದನೆ ಮಾಡಲಾಗುವುದು. ಇದರಿಂದ ರೈತರಿಗೆ ಒಳ್ಳೆ ಬೆಲೆ ನೀಡಲು ಸಾಧ್ಯವಿದೆ. ಎಂದು ಹೇಳಿ ಸಕ್ಕರೆ ಕಾರ್ಖಾನೆಗಳಲ್ಲಿ ಆಗುತ್ತಿರುವ ಲಾಭ ನಾನು ಸ್ವಂತಕ್ಕೆ ಬಳಸದೆ ಸಕ್ಕರೆ ಕಾರ್ಖಾನೆಯ ರೈತರಿಗೆ ಬೇರೆ-ಬೇರೆ ರೂಪದಲ್ಲಿ ನೆರವು ನೀಡುತ್ತಿದ್ದೇನೆ.
ಸಕ್ಕರೆ ಕಾರ್ಖಾನೆಯ ಪ್ರತ್ಯಕ್ಷ ಕಬ್ಬುನೂರಿಸುವ ಹಂಗಾಮ ಬುಧವಾರ ೨೨ರಿಂದ ಪ್ರಾರಂಭಗೊಳ್ಳಲಿದೆ. ಎಂದು ಹೇಳಿದರು.
ಈ ವೇಳೆ ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ, ಸುಭಾಷ್ ಕಟಾರೆ, ಶಿವಾನಂದ ಪಾಟೀಲ್, ಕೃಷಿ ಅಧಿಕಾರಿ ಬಿ.ಎ ಜಗತಾಪ್, ಶೇಡಬಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ನ್ಯಾಯವಾದಿ ಶೇಖರ್ ಕಿನಿಂಗೆ, ಸಚಿನ್ ಕವಟಗೆ, ಪ್ರಕಾಶ್ ಚೌಗುಲ್ಲೆ, ಬಿ.ಎ ಪಾಟೀಲ್, ಸಚಿನ್ ಕೊತ್ಲಗೆ ಸೇರಿದಂತೆ ಅನೇಕರು ಇದ್ದರು.
Kagawad
ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ನೇತೃತ್ವದ ಅಥಣಿ ಫಾರ್ಮರ್ಸ್ ಶುಗರ್ ವರ್ಕ್ಸ್ ವತಿಯಿಂದ ಕಬ್ಬುನುರಿಸುವ ಗುರಿ.
