ಕುರಿಮಂದೆಯಿಂದ ಕುರಿಗಳನ್ನು ಕದಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ನೀಡಿ ಕುರಿಗಾಹಿಗಳಿಗೆ ಸಮರ್ಪಕ ಸುರಕ್ಷತೆ ಒದಗಿಸಬೇಕೆಂದು ಆಗ್ರಹಿಸಿ ಇಂದು ಕುರಿಗಾಹಿಗಳು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ನೂರಾರು ಕುರಿಗಾಹಿಗಳು ಕುರಿಗಳ್ಳರಿಂದ ರಕ್ಷಣೆ ನೀಡಬೇಕು ಮತ್ತು ಕುರಿಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೊದಲಿನಿಂದಲೂ ನಾವು ಕುರಿಗಳನ್ನು ಕಾಯುತ್ತೇವೆ. ಹಲವಾರು ಬಾರಿ ಮಂದೆಯಿಂದ ಕುರಿಯನ್ನು ಕಳ್ಳತನ ಮಾಡಲಾಗುತ್ತಿದೆ. ಈ ಕುರಿತು ದೂರು ಕೂಡ ಸಲ್ಲಿಸಲಾಗುತ್ತಿದೆ. ಕಳ್ಳರನ್ನು ಹಿಡಿದು ತರುತ್ತಾರೆ. ಬಿಟ್ಟು ಬಿಡುತ್ತಾರೆ. ಆದರೇ, ಕಠಿಣ ಕ್ರಮ ಜರುಗಿಸುತ್ತಿಲ್ಲ. ಬೆಟ್ಟಕ್ಕೆ ಹೋದರೇ ಅರಣ್ಯ ಇಲಾಖೆಯಿಂದ ಅಸಹಕಾರ. ಜನವಸತಿಯಲ್ಲಿ ಕುರಿ ಕಾಯ್ದರೇ, ಕಳ್ಳರ ತೊಂದರೆ. ಇದಲ್ಲದೇ, ಮಳೆರಾಯನ ಅವಕೃಪೆ. ಸರ್ಕಾರ ಕುರಿಗಾಹಿಗಳಿಗೆ ಯೋಗ್ಯ ಸೌಲಭ್ಯಗಳನ್ನು ಸುರಕ್ಷತೆಯನ್ನು ಒದಗಿಸಬೇಕು. ಇಲ್ಲದಿದ್ದರೇ, ನಮ್ಮೆಲ್ಲ ಕುರಿ ದನಕರುಗಳನ್ನು ಡಿಸಿ ಕಚೇರಿಗೆ ಕರೆ ತರುತ್ತೇವೆ. ಅವುಗಳಿಗೆ ಮೇವು ನಮಗೆ ಊಟ ನೀವೇ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾತ್ರಿಯ ವೇಳೆ ಸಮಯ ಸಾಧಿಸಿ ಕಳ್ಳರು ಕುರಿಗಳನ್ನು ಕದಿಯುತ್ತಿದ್ದಾರೆ. ವರ್ಷಕ್ಕೆ ಸುಮಾರು 3-4 ಸಾವಿರ ಕುರಿಗಳು ನಾಪತ್ತೆಯಾಗುತ್ತಿವೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೇ, ಸಾಕ್ಷ್ಯಧಾರಗಳನ್ನು ನೀಡಿ ಎನ್ನುತ್ತಿದ್ದಾರೆ. ಕುರಿಗಳ್ಳರಿಗೆ ಬಂದೂಕು ನೀಡಿದ್ದಾರೆ. ಆದರೇ, ಚಲಾಯಿಸುವ ಹಕ್ಕು ನೀಡಿಲ್ಲ. ನಂದಗಡದಲ್ಲಿ ಇಬ್ಬರು ಕಳ್ಳರು ಪತ್ತೆಯಾಗಿದ್ದಾರೆ. ಕುರಿಗಳ್ಳರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಲೇ ಬೇಕೆಂದು ಆಗ್ರಹಿಸಿದರು.
ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಕುರಿಗಾಹಿಗಳು ಭಾಗಿಯಾಗಿದ್ಧರು.

 
			 
 
 
  
					 
				 
						  
						  
						  
						 
						 
						