ಸಮಯ ಮಿತಿ ಮೀರಿದ ವೇಳೆ 2ನೇ ಬಾರಿ ಜಾನಪದ ಗಾಯಕ ಹನಮಂತಗೆ ಅವಕಾಶ ನೀಡಿದ ಹಿನ್ನೆಲೆ ಅಧಿಕಾರಿಗಳಿಬ್ಬರೂ ಕಿತ್ತಾಡಿಕೊಂಡ ಘಟನೆ ಕಿತ್ತೂರು ಉತ್ಸವದಲ್ಲಿ ನಡೆದಿದೆ.
ಕಿತ್ತೂರು ಉತ್ಸವದ ವೇದಿಕೆಯ ಮುಂದೆ ಬಹಿರಂಗವಾಗಿ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಕಿತ್ತೂರು ಕೋಟೆಯ ಆವರಣದಲ್ಲಿ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ 2ನೇ ಬಾರಿ ಹಾಡಲು ಜಾನಪದ ಗಾಯಕ ಹನುಮಂತನಿಗೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಎಸ್ಪಿ.ಡಾ. ಭೀಮಾಶಂಕರ್ ಗುಳೇದ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮೇಲೆ ಗರಂ ಆದರು. ಸಮಯಾವಕಾಶ ಮುಗಿದು ಹೋಗಿದೆ. ಮತ್ತೇ ಯಾಕೆ ಅವಕಾಶ ನೀಡಿದ್ರಿ? ಎಂದು ಪ್ರಶ್ನಿಸಿದ್ದಾರೆ. ಮುಂಬೈನಿಂದ ಸಿಂಗರ್ ಬಂದಿದ್ದಾರೆ. ಕೂಡಲೇ ಈಗೀನ ಕಾರ್ಯಕ್ರಮ ಬಂದ್ ಮಾಡಿ ಎಂದು ಹೇಳಿದ್ದಾರೆ. ಸಮಯ 11 ಗಂಟೆಯಾಗಿದ್ದು, ಭದ್ರತೆಯ ಪ್ರಶ್ನೆ ಹಿನ್ನೆಲೆ ಎಸ್ಪಿ ಅವರು ಈ ರೀತಿ ಹೇಳಿದ್ದಾರೆ.
ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಕೂಡ ನಾನೇನು ಮಾಡೋದ್ದಕ್ಕೆ ಆಗುತ್ತೆ. ಬೇಕಿದ್ರೇ ಬಂದ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇಬ್ಬರೂ ಅಧಿಕಾರಿಗಳು ಕೈ-ಕೈ ಮಾಡಿ ವಾಗ್ದಾಳಿ ಮಾಡುತ್ತಲೇ , ಇತ್ತ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ವೇದಿಕೆಗೆ ತೆರಳಿ, ಗಾಯಕ ಹಣಮಂತ್ ಮತ್ತು ಬಾಳು ಬೆಳಗುಂದಿ ಅವರಿಗೆ ಸನ್ಮಾನ ಮಾಡಿ ವೇದಿಕೆಯಿಂದ ಕಳುಹಿಸಿಕೊಟ್ಟರು.

