RSS ಸಂಘಟನೆಗೆ ನೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ RSS ಪಥಸಂಚಲನವು ಸಾವಿರಾರು ಸ್ವಯಂಸೇವಕರ ಸಮ್ಮುಖದಲ್ಲಿ ಅತ್ಯಂತ ಉತ್ಸಾಹದಿಂದ ಜರುಗಿತು.
ಸ್ವಯಂಸೇವಕರು ನಿಪ್ಪಾಣಿ ವಿವಿಧ ಭಾಗಗಳಲ್ಲಿ ಪಥಸಂಚಲನ ಜರುಗಿತು.ರಾಣಿ ಚನ್ನಮ್ಮ ವೃತ ,ಹಳೆ ಪಿಬಿ ರಸ್ತೆಯಿಂದ ಬೆಳಗಾವಿ ನಾಕಾ ಮೂಲಕ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಬಂದು ಕೊನೆಗೊಂಡಿತ್ತು. ಮೇರವಣಿ ಮಾರ್ಗದಲ್ಲಿ ರಂಗೋಲಿ ಹಾಕಿ ಹೂವುಗಳಿಂದ ಅಲಂಕಾರವನ್ನು ಮಾಡಲಾಗಿತ್ತು.ಡಾ! ಬಿ.ಆರ್.ಅಂಬೇಡ್ಕರ್, ಶಿವಾಜಿ ಮಹಾರಾಜ,ವಿಶ್ವಗುರು ಬಸವೇಶ್ವರರ,ಸಂಭಾಜಿ ಮಹಾರಾಜ,ರಾಣಿ ಚನ್ನಮ್ಮ ಸೇರಿದಂತೆ ಮುಂತಾದ ಮಹಾಪುರುಷರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ಸಿಪಿಐ ಬಿ.ಎಸ್.ತಳವಾರ,ಪಿಎಸ್ಐಗಳಾದ ಶಿವಾನಂದ ಕಾರಜೋಳ,ಅನಿತಾ ಠಾಥೋಡ,ಶಿವರಾಜ ನಾಯಿಕವಾಡಿ,ರಮೇಶ ಪವಾರ ಅವರೊಂದಿಗೆ ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯೂ ಭದ್ರತೆಯನ್ನು ವಹಿಸಿದರು.

 
			 
 
 
  
					 
				 
						  
						  
						  
						  
						 
						 
						