ರಾಜ್ಯ ಸರ್ಕಾರ ಆರ್ ಎಸ್ ಎಸ್ ಕಾರ್ಯ ಚಟುವಟಿಕೆ, ಬೆಳವಣಿಗೆ ನೋಡಬೇಕು. ಯಾವುದೇ ಒಂದು ಜಾತಿ ವರ್ಗಕ್ಕೆ ಸೇರಿಲ್ಲ.ಆರ್ ಎಸ್ ಎಸ್ ದೇಶ ಭಕ್ತಿ ಸಂಘಟನೆ. ದುರುದ್ದೇಶದಿಂದ ರಾಜ್ಯ ಸರ್ಕಾರ ಆರ್ ಎಸ್ ಎಸ್ ಅಸಕ್ತ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಪಾರ್ಲಿಮೆಂಟ್ ಮಾಜಿ ಸದಸ್ಯ
ಉಮೇಶ್ ಜಾಧವ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಸರ್ಕಾರ ಶಾಲಾ ಕಾಲೇಜು ಆವರಣದಲ್ಲಿ ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ ವಿಚಾರ ಮಾತನಾಡಿದ ಅವರು. ದೇಶದಲ್ಲಿ ನೈಸರ್ಗಿಕ ಆಪತ್ತು ಬಂದಾಗ ಮುಂದೆ ಇರುವುದು ಆರ್ ಎಸ್ ಎಸ್ ಕಾರ್ಯಕರ್ತರು. ಕಾಂಗ್ರೆಸ್ ನಾಯಕರು ಮರತಿದ್ದು ಪ್ರಣಬ್ ಮುಖರ್ಜಿ ಆರ್ ಎಸ್ ಎಸ್, ಎಸ್.ಎಂ.ಕೃಷ್ಣ ಹೊಗಳಿದ್ದಾರೆ.
ನಾಗಪುರದ ಕಾರ್ಯಕ್ರಮ ಭಾಗವಹಿಸಿದ್ಧರು.
ಸೈನಿಕರಿಂತೆ ಆರ್ ಎಸ್ ಎಸ್ ಕೆಲಸ ಮಾಡತಾ ಇದ್ದಾರೆ. ಮಾನವೀಯ ಮೌಲ್ಯಗಳನ್ನ ಕಲಿಸುವ ಸಂಘಟನೆ ಆರ್ ಎಸ್ ಎಸ್ ಆಗಿದೆ ಎಂದರು.
ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದು ಆರ್ ಎಸ್ ಎಸ್ ಕೊಡುಗೆ ಏನು ಅಂತಾ. ನಾನು ಹೇಳತಾ ಇದ್ದೇನೆ ಮಾನವೀಯ ಮೌಲ್ಯ ಕಲಿಸಿಕೊಡುವ ಸಂಘಟನೆ. ಶಿಶ್ತು, ಹಿರಿಯರಿಗೆ ಗೌರವ ಕೊಡುವುದನ್ನೇ ಕಲಿಸುವುದೇ ಆರ್ ಎಸ್ ಎಸ್. ಸರಕಾರದ ಎಲ್ಲ ತಂತ್ರ ಕುತಂತ್ರ ಯೋಜನೆ ಯೋಚನೆ ಉಪ ಯೋಗಿಸಿಕೊಂಡು ಆರ್ ಎಸ್ ಎಸ್ ಅಸಕ್ತ ಮಾಡುವ ಪ್ಲ್ಯಾನ ಇದೆ ಎಂದರು.

