KHANAPUR

ಖಾನಾಪೂರ ಪಟ್ಟಣದ ರಸ್ತೆ ಕೆಲಸ ಗೋವಾ ಕ್ರಾಸ್ ಹತ್ತಿರ ಸಿಲುಕಿಕೊಂಡ ಬಸ್ ಪ್ರಯಾಣಿಕರ ಪರದಾಟ

Share

ಖಾನಾಪೂರದ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಖಾನಾಪೂರ ಪ್ರವೇಶ ಮಾಡುವ ಮುಖ್ಯ ರಸ್ತೆಯೂ ಡಾಂಬರೀಕರಣ ಕಾಮಗಾರಿ ಕೆಲಸ ಪ್ರಾರಂಭವಾಗಿ ಸುಮಾರು 15 ದಿನ ಮೇಲೆಯೇ ಕಳೆದಿವೆ ಮೀನು ಮಾರುಕಟ್ಟೆಯ ಸಮೀಪ ನೀರಿನ ನಿಯಂತ್ರಣಕ್ಕೆ ಒಂದು ಸೇತುವೆ ನಿರ್ಮಾಣ ಕೂಡಾ ಆಗುತ್ತಿದೆ ಎರಡೂ ಕಡೆಯಿಂದಲೂ ಕೆಲಸ ಚಾಲ್ತಿ ಇದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಸಲುವಾಗಿ ಸ್ವಲ್ಪ ಮಟ್ಟಿಗೆ ಏನೋ ವ್ಯವಸ್ಥೆ ಮಾಡಲಾಗಿದೆ ಸುರಿಯುತ್ತಿರುವ ಮಳೆಗೆ ಈ ರಸ್ತೆಯ ಮೇಲೆ ಹಳಿಯಾಳ ಟೂ ಬೆಳಗಾವಿ ಬಸ್ ಒಂದು ಸಿಲುಕಿಕೊಂಡ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಸ್ಥಳದಿಂದ ಮೇಲುಡುಗೆ ಹೋಗುವುದು ಕಷ್ಟ ಇತ್ತ ಗೋವಾ ಕ್ರಾಸ್ ಬಳಿ ಬರುವುದಕ್ಕೂ ಕಷ್ಟ ಒಟ್ಟಿನಲ್ಲಿ ಪ್ರಯಾಣಿಕರು ಅಂತೂ ಅಂತೂ ಇಲ್ಲ ಇತ್ತು ಇಲ್ಲ ಎಂಬಂತೆ ನಡುರಸ್ತೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಈ ಮುಖ್ಯ ರಸ್ತೆಯ ಕೆಲಸ ಒಂದು ಬದಿಗೆ ಮಾಡಿ ಪೂರ್ಣಗೊಳಿಸಿ ಮುಖ್ಯ ಸಂಚಾರಕ್ಕೆ ಅನುವು ಮಾಡಿಕೊಂಡಬೇಕಾಗಿದ ಗುತ್ತಿಗೆ ದಾರನ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಗಸ್ತಿ ಅವರಿಗೆ ಮನವಿ ಸಲ್ಲಿಕೆ ಮಾಡಿಯೂ ಪ್ರಯೋಜನವಾಗಿಲ್ಲ ಗುತ್ತಿಗೆ ದಾರನ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪಾರುಮಾಡುವ ಸ್ಥಿತಿ ನಿಜಕ್ಕೂ ಬೇಸರವಾಗಿದೆ.

Tags:

error: Content is protected !!