ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿರುವದು ಅತ್ಯಂತ ಖಂಡನಿಯವಾಗಿದ್ದು ಎಂದು ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕಿಡಿಕಾರಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಶ್ರೀ ಅವರು ಕನ್ನಡದ ಕೆಲಸ ಮಾಡಿಯೇ ಇಲ್ಲ. ಕರ್ನಾಟಕ ಸರಕಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ವಿಧಾನ ಪರಿಷತ್ತ ಸದಸ್ಯ ನಾಗರಾಜ ಯಾದವ ಅವರ ಪತ್ನಿ ಎಂಬ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆಯೆಂಬ ಭಾವನೆ ಉಂಟಾಗಿದ್ದು ಸರಕಾರಕ್ಕೆ ಕಳಂಕ ತಂದಂತಾಗಿದೆ ಎಂದರು.
ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯು ಕನ್ನಡ ನಾಡು, ನುಡಿ, ಗಡಿಯ ಸಂಬಂಧ ಯಾವಗಲೂ ನಕಾರಾತ್ಮಕ ನಿಲುವು ತಳೆಯುತ್ತ ಬಂದಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಧಿಕ್ಕರಿಸುತ್ತಲೇ ಬಂದಿದೆ. ಸಂಸ್ಥೆಯ ಒಂದೂ ನಾಮ ಫಲಕಗಳಲ್ಲಿ ಕನ್ನಡವು ಕಾಣುವುದಿಲ್ಲ ಎಂದು ಆರೋಪಿಸಿದರು.
ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿಯನ್ನು 60 ವರ್ಷ ವಯಸ್ಸಿಗಿಂತ ಮೇಲಿನವರಿಗೆ ಕೊಡಬೇಕೆಂಬ ನಿಯಮವನ್ನು ಸಹ ರಾಜಶ್ರೀಯವರ ವಿಷಯದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ರಾಜಶ್ರೀ ಅವರಿಗೆ ನೀಡಲು ಉದ್ದೇಶಿಸಿರುವ ಪ್ರಶಸ್ತಿಯನ್ನು ಸರಕಾರದ ಮಾನ, ಮರ್ಯಾದೆ, ಗೌರವದ ದೃಷ್ಟಿಯಿಂದ ತತಕ್ಷಣ ತಡೆಹಿಡಿಯಬೇಕೆಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದ ಅನೇಕ ಗಣ್ಯ ಮಾನ್ಯರಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಪತ್ರಿಕೋದ್ಯಮ ಹಾಗೂ ಕನ್ನಡ ಹೋರಾಟಗಳಲ್ಲಿ ಅನೇಕ ಮಹನೀಯರಿದ್ದಾರೆ. ಈ ಕೆಳಕಂಡ ಅವರ ಬಗ್ಗೆ ತಾವು ಸಹಾನುಭೂತಿಯಿಂದ ಪರಿಶೀಲಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಬೇಕು ಎಂದರು.
BELAGAVI
         ಮರಾಠಾ ಮಂಡಳ ಅಧ್ಯಕ್ಷೆಗೆ ರಾಜ್ಯೋತ್ಸವ ಪ್ರಶಸ್ತಿ; ಅಶೋಕ ಚಂದರಗಿ ಆಕ್ಷೇಪ!!!
 
				
 
			 
 
 
  
					 
						  
						  
						  
						 
						 
						