ಮಾಜಿ ನಗರ ಸೇವಕರಾದ ನೇತಾಜೀ ನಾರಾಯಣ್ ಜಾಧವ್ ಅವರು ಸಾಮಾಜೀಕ ಸಹಕಾರ, ಶೈಕ್ಷಣಿಕ ಮತತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ತರ ಯೋಗದಾನವನ್ನು ನೀಡಿದ್ದಾರೆ. ಈ ಹಿನ್ನೆಲೆ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಲು ಅವರ ಅಮೃತ ಮಹೋತ್ಸವವನ್ನು ಅಕ್ಟೋಬರ್ 16 ರಂದು ಆಯೋಜಿಸಲಾಗಿದೆ.
ಅಕ್ಟೋಬರ್ 16 ರಂದು ಬೆಳಗಾವಿಯ ಮರಾಠಾ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರದ ಮಾಜಿ ವಿತ್ತ ಸಚಿವ ಜಯಂತ್ ಪಾಟೀಲ್ ಉಪಸ್ಥಿತರಿರಲಿದ್ದಾರೆ. ವಿಶೇಷ ಅತಿಥಿಗಳಾಗಿ ಮರಾಠಾ ಕೋ-ಆಪ್ ಬ್ಯಾಂಕಿನ ಚೇರಮನ್ನರಾದ ಬಾಳಾರಾಮ್ ಪಾಟೀಲ್. ಮಾಜಿ ಮಹಾಪೌರರಾದ ಮಾಲೋಜಿರಾವ್ ಅಷ್ಠೇಕರ, ದಿ ಬೆಳಗಾಂವ ಬೇಕರ್ಸ್ ಕೋ.ಆಪ್ ಸೊಸೈಟಿಯ ಮಾಜಿ ಚೇರಮನ್ ಶಿವಾಜೀರಾವ್ ಹಂಗೀರಗೇಕರ ಉಪಸ್ಥಿತರಿರಲಿದ್ದಾರೆ. ಮರಾಠಾ ಸಮಾಜ ಸುಧಾರಣಾ ಮಂಡಳದ ಅಧ್ಯಕ್ಷರಾದ ಪ್ರಕಾಶ ಮರಗಾಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ.