BELAGAVI

ಬೆಳಗಾವಿಯ ಜುಡೋ ಕ್ರೀಡಾಪಟುಗಳ ರಾಷ್ಟ್ರಮಟ್ಟದ ಸಾಧನೆ

Share

ಬೆಳಗಾವಿಯ ಕ್ರೀಡಾ ವಸತಿ ನಿಲಯದ ಜುಡೋ ಕ್ರೀಡಾಪಟುಗಳು ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ವಿವಿಧ ಜುಡೋ ಪಂದ್ಯಾವಳಿಗಳಲ್ಲಿ ಒಟ್ಟು 45ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿದ್ದು, ವಿವಿಧ ರಾಷ್ಟ್ರಮಟ್ಟದ ಪಂದ್ಯಾವಳಿಗಳಿಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಜುಡೋ ಪಂದ್ಯಾವಳಿ ಪಂದ್ಯಾವಳಿಯಲ್ಲಿ ತುಕಾರಾಮ ಲಮಾನಿ, ವೈಭವ ಪಾಟೀಲ, ನೇತ್ರಾ ಪತ್ರಾವಳೆ, ಅಂಜಲಿ ಪಾಟೀಲ, ದರ್ಶನ ಪಾಟೀಲ, ಧನುಶ್ ಎಲ್ ಸೇರಿದಂತೆ ಹಲವು ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾದರು. ಅಂತರಕಾಲೇಜು ಜುಡೋ ಪಂದ್ಯಾವಳಿಯಲ್ಲಿ ಭೂಷಣ ವನಾರಸೆ, ಸೌರಭ ಪಾಟೀಲ, ರೋಹಣ ಬಿ.ಎಸ್, ರಾಧಿಕಾ ಡುಕರೆ, ಸಾಯಿಶ್ವರಿ ಕೊಡಚವಾಡಕರ ಚಿನ್ನದ ಪದಕಗಳನ್ನು ಪಡೆದು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜರುಗುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಆಸಿಮಾ ಸನ್ಮಾನಿ, ಮೇಘನಾ ಮುಲ್ಯಾ, ಕಾವೇರಿ ಸೂರ್ಯವಂಶಿ, ಆರತಿ ಮುರಕುಟೆ, ವೈಭವ ಪಾಟೀಲ, ಅಂಜಲಿ ಪಾಟೀಲ ಸೇರಿದಂತೆ 11 ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ರಾಜಸ್ತಾನ ಹಾಗೂ ಮಣಿಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಪದವಿಪೂರ್ವ ಜುಡೋ ಪಂದ್ಯಾವಳಿಯಲ್ಲಿ ಸ್ಪಂದನಾ, ಶ್ವೇತಾ ಅಲಕನೂರ, ದಿವ್ಯಾ ಪಾಟೀಲ, ಸೋನಾಲಿಕಾ ಸಿ.ಎಸ್, ಸಂಗಮೇಶ ಮದಲಿ, ಬಸಲಿಂಗಯ್ಯ ಅಥನಿಮಠ, ಧನುಶ್ ಎಲ್ ಸೇರಿದಂತೆ 11 ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗೆದ್ದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.

Tags:

error: Content is protected !!