Banglore

ರಂಭಾಪುರಿ ಪೀಠಕ್ಕೆ ಮೈಸೂರು ಮಹಾರಾಜರು

Share

ಮೈಸೂರು

ಇದೇ ನವೆಂಬರ್ 27 ರಂದು ಜರುಗುವ ರಂಭಾಪುರಿ ಲಿಂ. ಜಗದ್ಗುರು ಶಿವಾನಂದ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವಕ್ಕೆ ಮೈಸೂರಿನ ಮಹಾರಾಜರು, ಸಂಸದರಾದ ಯಧುವೀರ ಒಡೆಯರು ಆಗಮಿಸಲಿದ್ದಾರೆ.
ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆದೇಶದಂತೆ ಇಂದು ಮೈಸೂರಿನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ

ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೇಬಿಮಠದ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ. ತ್ರೀನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಅವರು ಕೊಣ್ಣೂರ ಮರಡಿಮಠದ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಪೀಠದ ವತಿಯಿಂದ ಅಧಿಕೃತವಾಗಿ ಮೈಸೂರು ಮಹಾರಾಜರಿಗೆ ಆಹ್ವಾನಿಸಿದರು.

ಆಮಂತ್ರಣ ಸ್ವೀಕರಿಸಿದ ಯಧುವೀರ ಒಡೆಯರು1941ರಲ್ಲಿ ಮೈಸೂರಿನ ಮಹಾರಾಜರಾದ ಶ್ರೀಮನ್ ರಾಜೇಂದ್ರ ಒಡೆಯರು ಶಿವಾನಂದ ಜಗದ್ಗುರುಗಳನ್ನು ರಂಭಾಪುರಿ ಪೀಠದಲ್ಲಿ ಭೇಟಿ ಮಾಡಿ ಪೀಠದ ಆಶೀರ್ವಾದವನ್ನು ಒಡೆಯರು ಸ್ಮರಿಸಿಕೊಂಡರು

Tags:

error: Content is protected !!