Bagalkot

ಬನಹಟ್ಟಿಯಲ್ಲಿ ಕರವೇ ಒತ್ತಾಯಕ್ಕೆ ಮಣಿದ ನಗರಸಭೆ: ಶೇ. 60ರಷ್ಟು ಕನ್ನಡ ನಾಮಫಲಕಕ್ಕೆ ನೋಟಿಸ್ ಜಾರಿ

Share

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬನಹಟ್ಟಿಯಲ್ಲಿ ಕನ್ನಡ ಕಡ್ಡಾಯ ನಾಮಫಲಕ ಕಾರ್ಯಾಚರಣೆ ನಡೆಸಿ, ಶೇಕಡಾ 60% ಕನ್ನಡ ನಾಮಫಲಕ ಬರೆಸುವಂತೆ ಬೀದಿಗಿಳಿದು ಒತ್ತಾಯಿಸಿದ್ದಾರೆ.

ಕರವೇ ಮಾಜಿ ಮಹಿಳಾ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ, ಇಂಗ್ಲಿಷ್ ನಾಮಫಲಕಗಳನ್ನು ಬದಲಿಸುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು. “ಇಂಗ್ಲಿಷ್ ನಾಮಫಲಕ ಬದಲಿಸುವಂತೆ ಸೂಚಿಸಿ ಎರಡು ವರ್ಷಗಳೇ ಕಳೆದಿವೆ. ನವೆಂಬರ್ 1ರ ಒಳಗಾಗಿ ನಾಮಫಲಕ ಬದಲಿಸಿ, ಇಲ್ಲವಾದರೆ ಎಲ್ಲವನ್ನೂ ಕಿತ್ತುಹಾಕುವ ಹಕ್ಕು ನಮಗಿದೆ,” ಎಂದು ಕರವೇ ಕಾರ್ಯಕರ್ತರು ನಗರಸಭೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದರ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಸಿಬ್ಬಂದಿ, ಇಂಗ್ಲಿಷ್ ನಾಮಫಲಕ ಹೊಂದಿರುವ ಅಂಗಡಿ ಮಾಲೀಕರಿಗೆ ಕೂಡಲೇ ಕನ್ನಡ ನಾಮಫಲಕ ಬರೆಸುವಂತೆ ನೋಟಿಸ್ ನೀಡಿದ್ದಾರೆ. ಬನಹಟ್ಟಿ ಬಸ್ ನಿಲ್ದಾಣದ ಮುಂಭಾಗ ಸೇರಿದಂತೆ ನಗರದ ದೊಡ್ಡ ಅಂಗಡಿಗಳಿಗೆ ಈ ನೋಟಿಸ್ ನೀಡಲಾಗಿದ್ದು, ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ.

Tags:

error: Content is protected !!