ಒಂದೆಡೇ ಶಾಸಕ ವಿಜಯಾನಂದ ಕಾಶಪ್ಪನವರ ಸಚಿವ ಸ್ಥಾನ ನೀಡುವುದು ಬಿಡುವುದು ಸಿಎಂಗೆ ಬಿಟ್ಟಿದ್ದು, ಈ ಖಾವಿಧಾರಿ ಮಾತಿಗೆ ನಾವು ಕ್ಯಾರೆ ಅನ್ನೋದಿಲ್ಲ, ಕೇರ್ ಸಹ ಮಾಡೋದಿಲ್ಲ ಎಂದಿದ್ದರು. ಇನ್ನೊಂದೆಡೇ ಈಗ ಬಸವಜಯ ಮೃತ್ಯುಂಜಯ ಸ್ವಾಮಿಜೀಗಳು ಯಾವುದೇ ಸಚಿವರು ಶಾಸಕರಿಂದ ಸಮಾಜದ ಉನ್ನತಿ ಸಾಧ್ಯವಿಲ್ಲ. ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂಗೆ ಬಿಟ್ಟಿದ್ದು ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸಚಿವ ಮತ್ತು ಶಾಸಕ ಸ್ಥಾನದಿಂದ ಸಮಾಜ ಉದ್ಧಾರವಾಗಿಲ್ಲ. ಶಾಸಕರಾದ ಮೇಲೆ ನ್ಯಾಯ ಕೊಡಿಸಲು ಕೆಲವರು ಮಾತ್ರ ಪ್ರಾಮಾಣಿಕ ಪ್ರಯತ್ನಪಟ್ಟರು. ಆಮೇಲೆ ಬೇರೆಯವರು ಏನೆಲ್ಲ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಮೀಸಲಾತಿಯಿಂದಲೇ ಸಮಾಜಕ್ಕೆ ನ್ಯಾಯ ಸಿಗಲು ಸಾಧ್ಯ. ಸಚಿವರು ಶಾಸಕರು ಆದರೂ ಎಷ್ಟರ ಮಟ್ಟಿಗೆ ಹೋರಾಟ ಮಾಡಿದ್ದಾರೆ ಎಂಬುದು ಗೊತ್ತಿದೆ. ಸಚಿವ ಸ್ಥಾನ ಯಾರಿಗೇ ನೀಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಜನರು ಈಗ ತಿರ್ಮಾಣ ಮಾಡಿದ್ದಾರೆ. ಯಾವುದೇ ಸಚಿವರು ಶಾಸಕರಿಂದ ಸಮಾಜ ಉದ್ಧಾರವಾಗುವುದಿಲ್ಲ. ಮೀಸಲಾತಿಗಾಗಿ ಯಾರೂ ಪ್ರಾಮಾಣಿಕ ಹೋರಾಟ ಮಾಡುತ್ತಾರೆ ಅವರಿಂದಲೇ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದರು.
ಇನ್ನು ಆರ್.ಎಸ್.ಎಸ್. ನಿರ್ಬಂಧಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀಗಳು ದೇಶದಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಿಗೊಳಿಸುವ ಅನೇಕ ಸಂಘಟನೆಗಳಿವೆ. ಅವುಗಳ ಬಗ್ಗೆ ರಾಜಕಾರಣಿಗಳು ತುಚ್ಛವಾಗಿ ಮಾತನಾಡಬಾರದು. ಎಲ್ಲರಿಗೂ ಅವರವರ ಸಂಘಟನೆಗಳೊಂದಿಗೆ ಭಾವನಾತ್ಮಕ ಸಂಘಟನೆಯಲ್ಲಿವೆ ಎಂದರು.

 
			 
 
 
  
					 
				 
						  
						  
						  
						  
						 
						 
						