Kittur

201ನೇ ಕಿತ್ತೂರು ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ…

Share

ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಬಂಡಾಯದ ಕಹಳೆ ಊದಿದ ಬೆಳಗಾವಿ ಜಿಲ್ಲೆಯ ಕಿತ್ತೂರು ರಾಣಿ
ಚೆನ್ನಾಮ್ಮಾಜಿಯ ವಿಜಯೋತ್ಸವಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು.

ಬೆಳಗಾವಿ ತಾಲೂಕಿನ ಕಿತ್ತೂರಿನಲ್ಲಿ 201ನೇ ಕಿತ್ತೂರು ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉತ್ತರ ಶಾಸಕ ಆಸೀಫ್ ಸೇಠ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಇನ್ನುಳಿದ ಗಣ್ಯರು ಅಶ್ವಾರೂಢ ರಾಣಿ ಚೆನ್ನಮ್ಮನ ಮೂರ್ತಿ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ 201ನೇ ಕಿತ್ತೂರು ಉತ್ಸವದ ಮೆರವಣಿಗೆಗೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ನಂತರ ಗಣ್ಯರು ಕಿತ್ತೂರು ರಾಣಿ ಚೆನ್ನಮ್ಮ ಸಭಾಭವನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಈ ಕುರಿತು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದರು.

ಈ ವೇಳೆ ವಿವಿಧ ಗಣ್ಯರು ಭಾಗಿಯಾಗಿದ್ಧರು. ವಿವಿಧ ಜಾನಪದ ಕಲಾಪಥಕಗಳು ಭಾಗಿಯಾದ ಮೆರವಣಿಗೆಯೂ ಎಲ್ಲರ ಕಣ್ಮನ ಸೆಳೆಯಿತು.

Tags:

error: Content is protected !!