ಇಂದಿನ ವಿಜ್ಞಾನ ಯುಗದ ಹೆಸರಿನಲ್ಲಿ ದೇಶ, ರಾಜ್ಯದಲ್ಲಿ ಅನೇಕ ಕುಟುಂಬದವರು ತಮ್ಮ , ಜನ್ಮ ನೀಡಿದವರನ್ನು ಹಿರಿಯರನ್ನು ನೆನಪಿಸದೆ ಇರೋವರ ಸಂಖ್ಯೆ ಅಧಿಕವಾಗಿದೆ. ಆದರೆ, ದೇಶಕ್ಕೆ ಸ್ವಾತಂತ್ರ‍್ಯ ತಂದ ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇವರ ಜಯಂತಿ ಜಾಚೂ ತಪ್ಪದೆ ಕಳೆದ ೬೦ ವರ್ಷಗಳಿಂದ ತಾತ, ಮಗ, ಮೊಮ್ಮಗ ಮೂರು ತಲೆಮಾರು ಕುಟುಂಬದವರು ಆಚರಿಸುತ್ತ ಬರುತ್ತಿದ್ದಾರೆ. ಅದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಅಪ್ಪಟ ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಆಗಿರುವ ಜೈನ ಸಮಾಜದ ಜಿನ್ನಪ್ಪಾ ಯಾದವಾಡೆ ಕುಟುಂಬದವರು.
ಗುರುವಾರ ರಂದು ಮಹಾತ್ಮಾ ಗಾಂಧೀಜಿ ಇವರ ಜಯಂತಿ ಶೇಡಬಾಳ ಪಟ್ಟಣದಲ್ಲಿ ಬಾಹುಬಲಿ ಜಿನ್ನಪ್ಪಾ ಯಾದವಾಡೆ ಕುಟುಂಬದವರು ಆಚರಿಸಲು.
ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅಪ್ಪಟ ಗಾಂಧಿ ವಾದಿ ಜಿನ್ನಪ್ಪಾ ಯಾದವಾಡೆ ಇವರ ಪರಂಪರೆ ಮಗ ಮೊಮ್ಮಕ್ಕಳು ಮುಂದೆ ವರಿಸಿದ್ದಾರೆ.
ಗುರುವಾರ ರಂದು ತೆರೆದ ವಾಹನದ ಮೇಲೆ ಗಾಂಧೀಜಿ ಇವರ ಭಾವಚಿತ್ರ ಇಟ್ಟುಕೊಂಡು ಸಹವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಮಾರ್ಗಗಳ ಮುಖಾಂತರ ಇವರ ಪ್ರತಿಮೆಯ ಮೆರವಣಿಗೆ ಹಮ್ಮಿಕೊಂಡರು.
ಸ್ವಾತಂತ್ರ್ಯ ಹೋರಾಟಗಾರು ದಿವಂಗತ ಜಿನ್ನಪ್ಪಾ ಯಾದವಾಡೆ ಇವರು ೧೯೪೨ರ “ಭಾರತ ಛೋಡೋ ಚಳುವಳಿ” ಪ್ರಾರಂಭವಾದಾಗ ಮಹಾತ್ಮ ಗಾಂಧೀಜಿಯವರು ರೈಲು ಮುಖಾಂತರ ಹೋಗುವಾಗ ಶೇಡಬಾಳ ರೈಲು ನಿಲ್ದಾಣದಲ್ಲಿ ಇಳಿದು ಯುವಕರಿಗೆ ಬ್ರಿಟಿಷರ ವಿರುದ್ಧ ಭಾರತ ಛೋಡೋ ಚಳುವಳಿ ಬಗ್ಗೆ ಬಿಂಬಿಸಿದರು. ಇದನ್ನು ಆಗಿನ ಯುವಕ ಜಿನ್ನಪ್ಪಾ ಯಾದವಾಡೇ ಮನದಟ್ಟು ಮಹಾತ್ಮಾ ಗಾಂಧೀಜಿ ಇವರ ಸಂದೇಶ ತೆಗೆದುಕೊಂಡು ದೇಶಪ್ರೇಮ, ಸ್ವಾತಂತ್ರ್ಯಕ್ಕಾಗಿ ಹೊರಹಾಕಿದರು. ಆಗಿಂದ ಮಹಾತ್ಮ ಗಾಂಧೀಜಿ ಇವರ ಬಗ್ಗೆ ಅಪಾರಭಕ್ತಿ ನಿರ್ಮಾಣವಾಯಿತು. ಸ್ವಾತಂತ್ರ್ಯ ದೇಶದ ಚಳುವಳಿಯಲ್ಲಿ ಭಾಗವಹಿಸಿದ್ದರು.
ಜಿನ್ನಪ್ಪಾ ಯಾದವಾಡೆ ಇವರು ಮೊದಲು ಈ ಮೆರವಣಿಗೆ ಗಾಂಧೀಜಿ ಅವರ ಭಾವಚಿತ್ರ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು,, ನಂತರ ಅದು ಸೈಕಲ್ ಮೆರವಣಿಗೆಯ ರೂಪ ಪಡೆದಿತು. ಜಿನ್ನಪ್ಪಾ ಯಾದವಾಡೆ ಅವರ ನಿಧನದ ನಂತರ, ಅವರ ಪುತ್ರ ಬಾಹುಬಲಿ ಯಾದವಾಡೆ , ಧರ್ಮಪತ್ನಿ ಜಿನಮತಿ, ಮಕ್ಕಳಾದ ಜಯಧವಲ, ಪಟ್ಟಣ ಪಂಚಾಯಿತಿ ಸದಸ್ಯ ಮಹಾಧವಲ ಹೌಸೇಂದ್ರ ಯಾದವಾಡೆ, ಮತ್ತು ಅವರ ಕುಟುಂಬದವರು ಗಾಂಧೀ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರು.
ಮೊಮ್ಮಕ್ಕಳಾದ ರಾಜಶ್ರೀ, ಶ್ರೇಯಾ, ಶ್ರದ್ಧಾ ಇವರ ಸಹಕಾರದಲ್ಲಿಯೂ ಈ ಆಚರಣೆ ಮುಂದುವರಿಯುತ್ತಿದೆ.
ಗುರುವಾರ ರಂದು, ಬಾಹುಬಲಿ ಯಾದವಾಡೆ ಮತ್ತು ಪಟ್ಟಣ ಪಂಚಾಯತ್ ಸದಸ್ಯ ಮಹಾಧವಲ ಯಾದವಾಡೆ ಅವರ ನೇತೃತ್ವದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ತೆರೆದ ವಾಹನದ ಮೇಲೆ ಇಟ್ಟುಕೊಂಡು ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು. ಈ ಕುಟುಂಬವು ಇತರ ಹಬ್ಬಗಳನ್ನು ಆಚರಿಸದೆ ಗಾಂಧಿ ಜಯಂತಿಯನ್ನು ಮುಖ್ಯ ಹಬ್ಬವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ. ಎಂದು ಬಾಹುಬಲಿ ಯಾದವಾಡೆ ಹೇಳಿದರು.
ಶೇಡಬಾಳದ ಅಪ್ಪಟ ಕನ್ನಡ ಅಭಿಮಾನಿ ಎಂ ಡಿ. ಅಲಾಸೆ ಇವರು ಮಾತನಾಡಿ ಯಾದವಾಡೆ ಕುಟುಂಬದವರು ಮಹಾತ್ಮ ಗಾಂಧೀಜಿ ಇವರ ಬಗ್ಗೆ ಇಟ್ಟಿರುವ ಅಭಿಮಾನ, ಭಕ್ತಿ ನಾನು ಈವರೆಗೆ ಎಲ್ಲೆ ಕಂಡಿಲ್ಲ. ತಂದೆ, ಮಕ್ಕಳು, ಮೊಮ್ಮಕ್ಕಳು ಕಳೆದ 60 ವರ್ಷಗಳಿಂದ ಬೇರೆ ಬೇರೆ ಹಬ್ಬಗಳು ಆಚರಿಸದೆ ಗಾಂಧೀಜಿ ಇವರ ಜಯಂತಿ ಆಚರಿಸುತ್ತಿದ್ದಾರೆ. ಇದು ಇನ್ನೊಬ್ಬ ಕುಟುಂಬಗಳಿಗೆ ಹಾಗೂ ದೇಶದ ಗಾಂಧಿಜಿ ಭಕ್ತರಿಗೆ ಮಾದರಿಯಾಗಿದೆ ಎಂದರು.
ದಿವಂಗತ ಜಿನ್ನಪ್ಪಾ ಯಾದವಾಡೆ ಇವರ ಮೊಮ್ಮಗಳು ಶ್ವೇತಾ ದುಗೆ ಮಾತನಾಡಿ ನಮ್ಮ ತಾತ ಜಿನ್ನಪ್ಪಾ ಯಾದವಾಡಿ ಇವರು ಮಹಾತ್ಮ ಗಾಂಧೀಜಿ ಇವರ ಬಗ್ಗೆ ಇಟ್ಟಿರುವ ಶ್ರದ್ಧಾ, ಭಕ್ತಿ, ಅಪಾರವಿದೆ ನಾವು ರೈತಾಪಿ ಮಾಧ್ಯಮ ವರ್ಗದ ಕುಟುಂಬದವರು. ತಾತ ಇಟ್ಟ ನಂಬಿಕೆ ನಮ್ಮ ತಂದೆ ತಾಯಿ ಎಲ್ಲ ಸಹೋದರರು ಇಟ್ಟುಕೊಂಡಿ ನಿರಂತರವಾಗಿ ಗಾಂಧಿ ಜಯಂತಿ ಆಚರಿಸುತ್ತಿದ್ದೇವೆ. ನಾವು ಬೇರೆ ಬೇರೆ ಹಬ್ಬಗಳು ಆಚರಿಸುತ್ತಿಲ್ಲ ಗಾಂಧೀಜಿ ಇವರ ಜಯಂತಿ ನಿಮಿತ್ಯ ಮನೆಯಲ್ಲಿ ಹಬ್ಬ ಆಚರಿಸುತ್ತೇವೆ. ಈ ದಿನ ಬೆಳಗ್ಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆ ಹಮ್ಮಿಕೊಂಡು ಸಿಹಿ ಊಟ ನಿರ್ಮಿಸಿ ಎಲ್ಲ ಗಾಂಧಿ ವಾದಿ ಭಕ್ತರಿಗೆ ಹಂಚುವ ಪರಂಪರೆ ಇದೆ. ಎಲ್ಲರೂ ನಿರ್ಮಳ ಮನಸ್ಸಿನಿಂದ ಜಯಂತಿ ಆಚರಿಸುತ್ತೇವೆ. ಭಗವಂತನು ಈ ಮುಂದೆವು ಇದೇ ರೀತಿ ಜಯಂತಿ ಆಚರಿಸಲು ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಬೇಡಿಕೊಂಡರು.
ಬಾಹುಬಲಿ ಯಾದವಾಡೆ ಇವರು ಮಹಾತ್ಮ ಗಾಂಧೀಜಿ ಇವರು ಸತ್ಯಕ್ಕಾಗಿ ಹೋರಾಡಿದರು, ದೇಶದ ಅಭಿವೃದ್ಧಿ ವಾಗಲಿ ಎಂದು ತಮ್ಮ ಸಂಪೂರ್ಣ ಜೀವನದಲ್ಲಿ ಬೋಧನೆ ಮಾಡಿದರು. ಆದರೆ ಈಗ ಸಂಪೂರ್ಣ ಭಾರತ ದೇಶದಲ್ಲಿ ಕಲಬರಕೆ ರೂಪದಲ್ಲಿ ದಿನನಿತ್ಯ ಸೇವನೆ ಮಾಡಲು ಬಳಸುವ ತೈಲ ದಿಂದ ಅನೇಕ ಜನರಿಗೆ ಹೃದಯಕ್ಕೆ ತೊಂದರೆ ಮಾಡಿ ಹೃದಯಘಾತದಿಂದ ನಿಧನ ಹೊಂದುತ್ತಿದ್ದಾರೆ. ಇದನ್ನು ರಾಜ್ಯ ಹಾಗೂ ದೇಶದ ಜನನಾಯಕರು ಅಧಿಕಾರಿಗಳು ಕಂಡಿದ್ದರು ಕಾಣದಂತಿದ್ದರೆ. ಈ ಮೊದಲು ಹಳ್ಳಿಗಳಲ್ಲಿ ಘಾನದ ಮುಖಾಂತರ ಶೇಂಗಾ, ಸೂರ್ಯಪಾನ, ಕುಸುಬಿ ಬೀಜಗಳನ್ನು ಬಳಸಿ ಎಣ್ಣೆ ತೆಗೆದು ಅಡುಗೆಗೆ ಬಳಸುತ್ತಿದ್ದರು. ಹಳ್ಳಿಗಳಲ್ಲಿ ಈಗ ಈ ವ್ಯವಸಾಯ ನಿಂತುಹೋಗಿದೆ ಕಾರಣ ಎಣ್ಣೆ ಕಾಲಗಳು ಸಾಗಾಟ ಮಾಡುವ ರೈತರನ್ನು ತಡೆದು ಕರಬಸೂಲಾತಿ ಮಾಡುತ್ತಿದ್ದಾರೆ ದಯವಿಟ್ಟು ಅಡುಗೆಗೆ ಬಳಸುವ ಎಣ್ಣೆಗೆ ಟ್ಯಾಕ್ಸ್ ಗಳಿಂದ ಮುಕ್ತಿಗೊಳಿಸಿರಿ ಎಂದು ಕೇಳಿಕೊಂಡರು.
ಮೆರವಣಿಗೆಯಲ್ಲಿ ಜಿನಮತಿ ಬಾಹುಬಲಿ ಯಾದವಾಡೆ, ಹೌಸೇಂದ್ರ ಯಾದವಾಡೆ, ರಾಜಶ್ರೀ, ಶ್ರೇಯಾ, ಶ್ರದ್ಧಾ, ಶಾಂತಿನಾಥ, ಸುಯಶ, ಜಿನೇಂದ್ರ ಹಾಗೂ ಯಾದವಾಡೆ ಬಂಧುಗಳಾದ ಶ್ರೀಮಂತ ಯಾದವಾಡೆ, ಅನಂತಮತಿ
ಯಾದವಾಡೆ, ಪ್ರಮೋದ ಯಾದವಾಡೆ, ನ್ಯಾಯವಾದಿ ಅಶೋಕ ಮುತಾರೆ, ರಾವಸಾಬ ಮುಜಾವರ, ಕುಮಾರ ಮುಕುಂದ, ಸೇರಿದಂತೆ ಅನೇಕ ಗಾಂಧಿ ಅಭಿಮಾನಿಗಳು ಪಾಲ್ಗೊಂಡಿದ್ದರು.