ವಿಜಯಪುರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ಬಿಜೆಪಿ ನಾಯಕ ದಯಾಸಾಗರ ಪಾಟೀಲ ಇವರಿಗೆ ಜಿಲ್ಲೆಯಿಂದಲೇ ಹೊರ ಹಾಕಬೇಕು ಎಂದು ಉಪವಿಭಾಗಾಧಿಕಾರಿಗಳ ಮೂಲಕ ಇಂದು ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಗಾಣಿಗ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲು ಲೋಣಿ ತಿಳಿಸಿದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಗಾಣಿಗ ಸಮುದಾಯದ ಹಾಗೂ ಹಾಲುಮತ ಸಮುದಾಯದ ಮುಖಂಡರು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸಗಳಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರ ವಿರುದ್ಧ ದಯಾಸಾಗರ ಪಾಟೀಲ ಮಾಡಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ರಾಜಕೀಯ ಷ್ಯಡಂತ್ತ ಶಾಸಕ ಹೆಸರು ಕೆಡಿಸುವ ಹುನ್ನಾರ, ಕಳೆದ ೮ ವರ್ಷಗಳ ಹಿಂದೆ ೨ ಬಾರಿ ಯಶವಂತರಾಯಗೌಡ ಪಾಟೀಲ ಶಾಸಕರಾಗಿ ಜನಮನ ಗೆದ್ದಿದ್ದಾರೆ ಎಂದರು. ಹಾಲುಮತ, ಗಾಣಿಗ ಸಮುದಾಯದ ಜಿ.ಪಂ ತಾ.ಪಂ ಅಧಿಕಾರ ನೀಡಿದ್ದಾರೆ ಎಂದರು. ಇನ್ನೂ ೮ ವರ್ಷಗಳ ಹಿಂದೆ ಆಗಿರುವ ಘಟನೆ ಇಂದು ಶಾಸಕರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಯಾವ ಪುರುಷಾರ್ಥಕ್ಕೆ ಇದು ಸಾಮಾನ್ಯ ಜನರಿಗೆ ಅರಿವಾಗಿದೆ. ಕೂಡಲೆ ಕೈಬಿಡಬೇಕು ಇದನ್ನೇ ಮುಂದುವರೆಸಿದರೆ, ದಯಾಸಾಗರ ಪಾಟೀಲ ಇವರ ವಿರುದ್ಧ ಉಗ್ರಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು. ದಯಾಸಾಗರ ಪಾಟೀಲ ನಿಮಗೆ ಮತಕ್ಷೇತ್ರದಲ್ಲಿ ಒಳ್ಳೇಯ ಗೌರವ ಇತ್ತು ನಿಮಗೆ ಮುಗ್ದರು ಶಾಸಕರ ನಂತರ ನಿಮಗೆ ಜನ ಗೌರವಿಸುತ್ತಿದ್ದರು ಆದರೆ ಶಾಸಕ ಯಶವಂತರಾಯಗೌಡ ಪಾಟೀಲರ ವಿರುಧ್ಧ ಅಪಪ್ರಚಾರ ಮಾಡಿರುವುದು ಶೋಭ್ಯೆಯಲ್ಲ, ನೀವು ಗಾಣಿಗ ಸಮುದಾಯದ ಬಗ್ಗೆ ಆರೋಪ ಮಾಡುವಾಗ ಹಾಲುಮತ ಸಮುದಾಯ ಸೇರಿಸಿಕೊಂಡು ಮಾತನಾಡುವುದು ಯಾಕೆ ? ಶಾಸಕರು ಹಾಲುಮತ ಸಮಾಜ ಬಗ್ಗೆ ಶಾಸಕರು ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

 
			 
 
 
  
					 
				 
						  
						  
						  
						  
						 
						 
						